ಬೆಂಗಳೂರು, ಮೇ.23, ನ್ಯೂಸ್ ಎಕ್ಸ್ ಪ್ರೆಸ್: 17ನೇ ಲೋಕಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಮುಂದಿನ ಐದು ವರ್ಷಗಳ ಆಡಳಿತ ಚುಕ್ಕಾಣಿ ಯಾರು ಹಿಡಿಯಲಿದ್ದಾರೆ? ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿಗೆ ಅಧಿಕಾರಕ್ಕೆ ಬರುತ್ತಾರ ಅಥವಾ ರಾಹುಲ್ ಗಾಂಧಿ ಮೊದಲ ಬಾರಿಗೆ ಪ್ರಧಾನಿ ಗದ್ದುಗೆಗೇರುತ್ತಾರಾ ಎಂಬ ಕುತೂಹಲ ಇಡೀ ದೇಶದ ಜನರಲ್ಲಿದೆ. ಈ ಎರಡೂ ಸಾಧ್ಯತೆಗಳನ್ನು ಮೀರಿ ಪ್ರಾದೇಶಿಕ ಪಕ್ಷಗಳು ದೇಶದ ರಾಜಕೀಯ ದಿಕ್ಕನ್ನು ಬದಲಿಸುತ್ತಾರ ಎಂಬ ಪ್ರಶ್ನೆಯೂ ಎಲ್ಲರಲ್ಲಿದೆ.
ಮೊದಲ ಹಂತದ ಮತ ಎಣಿಕೆಯಲ್ಲಿ ದೇಶದ 107 ಕ್ಷೇತ್ರಗಳ ಪೈಕಿಯಲ್ಲಿ ಎನ್ ಡಿಎ 110, ಯುಪಿಎ 55 ಕ್ಷೇತ್ರಗಳಲ್ಲಿ ಇತರೆ 05 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಯುಪಿಎ 30, ವೈನಾಡು ಹಾಗೂ ಅಮೇಥಿಯಲ್ಲಿ ರಾಹುಲ್ ಗಾಂಧಿ ಮುಂಚೂಣಿಯಲ್ಲಿದ್ದಾರೆ. ವಾರಣಾಸಿಯಲ್ಲಿ ಮೋದಿ ಮುಂಚೂಣಿಯಲ್ಲಿದ್ದಾರೆ.
ಕರ್ನಾಟಕ
ಕರ್ನಾಟಕದಲ್ಲಿ 20 ಕ್ಷೇತ್ರದಲ್ಲಿ 16 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡ್ರೆ, 2 ಕ್ಷೇತ್ರದಲ್ಲಿ ಕಾಂಗ್ರೆಸ್, 2 ರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಹಿನ್ನೆಡೆಯಾಗಿದೆ. ಉಮೇಶ್ ಜಾಧವ್ ಮುನ್ನೆಡೆಯಲ್ಲಿದ್ದಾರೆ. ಬಾಗಲಕೋಟೆಯಲ್ಲಿ ಪಿ.ಸಿ.ಗದ್ದೀಗೌಡರ್ ಮುಂಚೂಣಿಯಲ್ಲಿದ್ದಾರೆ. ಮಂಡ್ಯದ ಕಣದಲ್ಲಿ ಸುಮಲತಾ ಮುಂಚೂಣಿಯಲ್ಲಿದೆ.
ಗುಜರಾತ್
ಅಮಿತ್ ಷಾ 25 ಸಾವಿರ ಮತಗಳಿಂದ ಮುನ್ನಡೆಯಲ್ಲಿದ್ದಾರೆ.