ಎನ್ಸಿಪಿ ಶಾಸಕ ನಾಪತ್ತೆ..!

ಎನ್ಸಿಪಿ ಶಾಸಕ ನಾಪತ್ತೆ..!

ಮುಂಬೈ, ನ. 24 : ದೇವೇಂದ್ರ ಫಡ್ನವಿಸ್ ಸಿಎಂ ಆಗಿ, ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದಾರೆ. ಈ ಮಧ್ಯೆ ಪ್ರಮಾಣವಚನ ಕಾರ್ಯಕ್ರಮಕ್ಕಾಗಿ ರಾಜಭವನಕ್ಕೆಂದು ತೆರೆಳಿದ್ದ ಎನ್ಸಿಪಿ ಎಂಎಲ್ಎ ಒಬ್ಬರು ನಾಪತ್ತೆಯಾಗಿದ್ದಾರೆ.
ಮಹಾರಾಷ್ಟ್ರ ರಾಜಕೀಯದಲ್ಲಿ ನಡೆದ ದಿಢೀರ್ ಬೆಳವಣಿಗೆಯಿಂದ ಬಿಜೆಪಿ, ಎನ್ಸಿಪಿ ಜೊತೆಗೂಡಿ ಸರ್ಕಾರ ರಚನೆ ಮಾಡಲು ಮುಂದಾಗಿದೆ. ಆದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮಕ್ಕೆಂದು ಬಂದಿದ್ದ ಶಹಾಪುರ ಎನ್ಸಿಪಿ ಎಂಎಲ್ಎ ದೌಲತ್ ದರೋಡಾ ನಾಪತ್ತೆಯಾಗಿದ್ದಾರೆ.

ಶುಕ್ರವಾರ ರಾತ್ರಿ ಶಹಪುರದಿಂದ ಮಗ ಕರಣ್ ಜೊತೆ ದೌಲತ್ ಅವರು ಥಾನೆಗೆ ಹೊರಟಿದ್ದರು. ಥಾನೆಯಿಂದ ಅಪ್ಪ ಮಗ ಒಟ್ಟಿಗೆ ಮುಂಬೈ ತಲುಪಿದ್ದರು. ಆದರೆ ಶನಿವಾರ ಬೆಳಗ್ಗೆಯಿಂದ ದೌಲತ್ ಅವರ ಫೋನ್ ನಾಟ್ರಿಚೇಬಲ್ ಆಗಿದೆ. ಜೊತೆಗಿದ್ದ ಮಗನಿಗು ಕೂಡ ತಂದೆ ಎಲ್ಲಿ ಹೋದರು ಎಂಬುದು ತಿಳಿದಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos