“ನಾವೇ ದುಡೀಬೇಕು ನಾವೇ ತಿನ್ನಬೇಕು” – ಯಶ್

“ನಾವೇ ದುಡೀಬೇಕು ನಾವೇ ತಿನ್ನಬೇಕು” – ಯಶ್

ಮಂಡ್ಯ, ಏ. 11, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮಾತಿನ ಸಮರ ಮುಂದುವರೆದಿದ್ದು, ಈ ಮೊದಲು ತಮ್ಮ ಕುರಿತು ಯೋಗ್ಯತೆ ಇಲ್ಲದವರು ಎಂಬ ಮಾತನಾಡಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದ ರಾಕಿಂಗ್ ಸ್ಟಾರ್ ಯಶ್ ಇಂದು ಮತ್ತೆ ಕುಟುಕಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಇಂದು ಮಂಡ್ಯ ಜಿಲ್ಲೆಯ ಯರಗನಹಳ್ಳಿಯಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಮಾತನಾಡಿದ ಯಶ್, ನಾವೇನು ಅಪ್ಪ, ತಾತ ಮಾಡಿದ ಆಸ್ತಿಯಲ್ಲಿ ಬದುಕಿಲ್ಲ. ನಾವೇ ದುಡೀಬೇಕು ನಾವೇ ತಿನ್ನಬೇಕು ಎಂದು ಹೇಳುವ ಮೂಲಕ ನಿಖಿಲ್ ಕುಮಾರಸ್ವಾಮಿಯವರನ್ನು ಮತ್ತೆ ಕೆಣಕಿದ್ದಾರೆ. ಈ ಮೊದಲು ಯಶ್ ಕುರಿತು ಮಾತನಾಡಿದ್ದ ನಿಖಿಲ್ ಕುಮಾರಸ್ವಾಮಿ, ಬಾಡಿಗೆ ಕಟ್ಟುವ ಯೋಗ್ಯತೆ ಇಲ್ಲದವರು ನನ್ನ ಬಗ್ಗೆ ಮಾತನಾಡುತ್ತಾರೆ ಎಂದಿದ್ದರು. ಇದಕ್ಕೆ ಉತ್ತರಿಸಿದ್ದ ಯಶ್, ಉತ್ತರ ಕರ್ನಾಟಕದ ಕಡೆ ಹೋದರೆ ನಾನು ಏನು ಮಾಡಿದ್ದೇನೆ ಎಂಬುದು ತಿಳಿಯುತ್ತದೆ. ಬಾಡಿಗೆ ಹಣವನ್ನು ಅಲ್ಲಿ ಹಾಕಿ ಸಾರ್ಥಕ ಕಾರ್ಯ ಮಾಡಿದ್ದೇನೆ ಎಂದಿದ್ದರು. ಇದೀಗ ಮತ್ತೊಮ್ಮೆ ಕುಟುಕಿದ್ದು ಇದಕ್ಕೆ ನಿಖಿಲ್ ಕುಮಾರಸ್ವಾಮಿ ಏನು ಹೇಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಫ್ರೆಶ್ ನ್ಯೂಸ್

Latest Posts

Featured Videos