ವಾಷಿಂಗ್ಟನ್ , ಆ. 25 : ಮದುವೆ ಮಾಡಿಕೊಂಡು ಚರ್ಚ್ ನಿಂದ ಹೊರ ಬರುತ್ತಿದ್ದ ನವದಂಪತಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ ದುರಂತ ಯುಎಸ್ನ ಟೆಕ್ಸಾಸ್ನಲ್ಲಿ ನಡೆದಿದೆ.
ಹಾರ್ಲೇ(19) ಮತ್ತು ರಿಯಾನನ್ ಮೋರ್ಗನ್(20) ಮೃತ ದುರ್ದೈವಿ. ಹಾರ್ಲೇ ಹಾಗೂ ರಿಯಾನನ್ ಪ್ರೀತಿಸಿ ಮದುವೆಯಾಗಿದ್ದರು. ಟೆಕ್ಸಾಸ್ನ ಜಾಯ್ ಡುಬೋಸ್-ಸಿಮಂಟನ್ ಬಳಿಯ ಜಸ್ಟಿಸ್ ಆಫ್ ಪೀಸ್ನ ಚೆಂಬರ್ ಹತ್ತಿರ ಈ ಅಪಘಾತ ಸಂಭವಿಸಿದೆ. ಲಾರಿ ಚಾಲಕನ ಅಜಾಗರೂಕತೆಗೆ ಹೊಸ ಜೀವನ ಆರಂಭಿಸಬೇಕಿದ್ದ ದಂಪತಿ ಮಸಣ ಸೇರಿದ್ದಾರೆ. ಅದ್ಧೂರಿಯಾಗಿ ಕಾರ್ಲೇ ಮತ್ತು ರಿಯಾನನ್ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದರು.