ದೇಶಾದ್ಯಂತ ಇಂದು ರಾಷ್ಟ್ರೀಯ ಕ್ರೀಡಾದಿನಾಚರಣೆಯ ಸಂಭ್ರಮ ಮನೆಮಾಡಿದೆ. ರಾಷ್ಟ್ರ ಕಂಡ ಸರ್ವಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರಾಗಿರುವ ಹಾಕಿ ದಿಗ್ಗಜ ಮೇಜರ್ ಧ್ಯಾನ್‌ಚಂದ್ ಅವರ ಹುಟ್ಟಿದ ದಿನವನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಿಸಲಾಗುತ್ತಿದ್ದು. ಈ ಮೂಲಕ ದಿಗ್ಗಜ ಕ್ರೀಡಾಪಟುವಿನ ನೆನಪಿನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡಲಾಗುತ್ತಿದೆ.
ಭಾರತ ಕ್ರೀಡಾಕ್ಷೇತ್ರದ ಕೆಲವೇ ಕ್ರೀಡೆಗಳಲ್ಲಿ ಮಾತ್ರವೇ ಹೇಳಿಕೊಳ್ಳುವಂತಾ ಸಾಧನೆ ಮಾಡಿದೆ. ಕ್ರೀಡಾ ವಿಭಾಗಕ್ಕೆ ದೊಡ್ಡ ಮಟ್ಟದ ಬೆಂಬಲ ಭಾರತದಲ್ಲಿ ಇಲ್ಲದೇ ಇದ್ದಿದ್ದು ಇದಕ್ಕೆ ಕಾರಣ. ಆದರೆ ಕಳೆದ ಒಂದೆರಡು ದಶಕಗಳಿಂದ ಇದು ಬದಲಾಗುತ್ತಿದೆ. ಅದರಲ್ಲೂ ಇತ್ತೀನ ವರ್ಷಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಭರವಸೆಗಳು ಮೂಡುತ್ತಿದೆ. ಸ್ಥಳೀಯ ಮಟ್ಟದಿಂದಲೇ ಕ್ರೀಡೆಗಳಿಗೆ ಪೂರಕವಾದ ವಾತಾವರಣಗಳನ್ನು ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿದೆ. ಇದಕ್ಕೆ ಮತ್ತಷ್ಟು ಉತ್ತೇಜನ ನೀಡುವ ದೃಷ್ಟಿಯಿಂದ ಈ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ವಿಶ್ವಮಟ್ಟದಲ್ಲಿ ಭಾರತದ ಹಾಕಿ ತಂಡವನ್ನು ಗುರುತಿಸುವಂತೆ ಮಾಡಿದ ಶ್ರೇಷ್ಠ ಆಟಗಾರ ಎಂದರೆ ಅದು ಧ್ಯಾನ್ ಚಂದ್. ದೇಶದ ಕೀರ್ತಿಯನ್ನು ಹೆಚ್ಚಿಸಿದ ಧ್ಯಾನ್ ಚಂದ್ ಅವರು 1905ರ ಆಗಸ್ಟ್ 29ರಂದು ಅಹಮದಾಬಾದ್ನಲ್ಲಿ ಜನಿಸಿದರು. ಈ ದಿನವನ್ನ ಭಾರತದಲ್ಲಿ ಪ್ರತಿವರ್ಷ ‘ರಾಷ್ಟ್ರೀಯ ಕ್ರೀಡಾ ದಿನ’ವಾಗಿ ಆಚರಿಸಲಾಗುತ್ತದೆ.
ಇಂದು ಹಾಕಿ ದಂತಕತೆ ಧ್ಯಾನ್ ಚಂದ್ ಅವರ 118ನೇ ಜನ್ನದಿನ. ಈ ದಿನವನ್ನ ಆಗಸ್ಟ್ 29 ರಂದು ಭಾರತದಲ್ಲಿ ಪ್ರತಿವರ್ಷ ‘ರಾಷ್ಟ್ರೀಯ ಕ್ರೀಡಾ ದಿನ’ವಾಗಿ ಆಚರಿಸಲಾಗುತ್ತದೆ. ರಾಷ್ಟ್ರೀಯ ಕ್ರೀಡಾ ದಿನವನ್ನು ರಾಷ್ಟ್ರದ ಕ್ರೀಡಾಪಟುಗಳಿಗೆ ಸಮರ್ಪಿಸಲಾಗಿದೆ. ಈ ದಿನ ದೇಶಕ್ಕೆ ಪ್ರಶಸ್ತಿಗಳನ್ನು ತರವಲ್ಲಿ ಅವರ ಕೊಡುಗೆ ಮತ್ತು ಸಮರ್ಪಣೆಯನ್ನು ಗೌರವಿಸಲಾಗುತ್ತದೆ.
ವಿಶ್ವಮಟ್ಟದಲ್ಲಿ ಭಾರತದ ಹಾಕಿ ತಂಡವನ್ನು ಗುರುತಿಸುವಂತೆ ಮಾಡಿದ ಶ್ರೇಷ್ಠ ಆಟಗಾರ ಎಂದರೆ ಅದು ಧ್ಯಾನ್ ಚಂದ್. ದೇಶದ ಕೀರ್ತಿಯನ್ನು ಹೆಚ್ಚಿಸಿದ ಧ್ಯಾನ್ ಚಂದ್ ಅವರು 1905ರ ಆಗಸ್ಟ್ 29ರಂದು ಅಹಮದಾಬಾದ್ನಲ್ಲಿ ಜನಿಸಿದರು. ಒಲಿಂಪಿಕ್ನಲ್ಲಿ ಸಾಲು ಸಾಲು ಚಿನ್ನ ಗೆಲ್ಲಿಸಿ ಕೊಟ್ಟಿರುವ ಧ್ಯಾನ್ ಅವರು 400ಕ್ಕೂ ಅಧಿಕ ಗೋಲು ಗಳಿಸಿದ್ದಾರೆ.
ವೃತ್ತಿಜೀವನದಲ್ಲಿ ಅವರು 570 ಗೋಲು ಸಿಡಿಸಿದರು. 1956ರಲ್ಲಿ ಪದ್ಮಭೂಷಣ ಪ್ರಶಸ್ತಿಯಿಂದ ಪುರಸ್ಕೃತರಾದರು. 1979ರ ಡಿಸೆಂಬರ್ 3ರಂದು ಪಿತ್ತಜನಕಾಂಗದ ಕ್ಯಾನ್ಸರ್ನಿಂದ ಅವರು ಮೃತಪಟ್ಟರು. ಅವರ ಸ್ಮರಣಾರ್ಥ ದೆಹಲಿಯ ರಾಷ್ಟ್ರೀಯ ಹಾಕಿ ಕ್ರೀಡಾಂಗಣಕ್ಕೆ ಧ್ಯಾನ್ ಚಂದ್ ಹೆಸರನ್ನು ಇಡಲಾಗಿದೆ.
ಮೇಜರ್ ಧ್ಯಾನ್ ಚಂದ್ ಅವರು 1956 ರಲ್ಲಿ ಭಾರತೀಯ ಸೇನೆಯ ಪಂಜಾಬ್ ರೆಜಿಮೆಂಟ್ ನಿಂದ ನಿವೃತ್ತರಾಧ ನಂತರ, ಭಾರತ ಸರ್ಕಾರವು ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ನೀಡಿ ಗೌರವಿಸಿದೆ.