ಹಣದ ಬೆಲೆ ನನಗೆ ಗೊತ್ತು: ಅಕ್ಷಯ್ ಕುಮಾರ

ಹಣದ ಬೆಲೆ ನನಗೆ ಗೊತ್ತು:  ಅಕ್ಷಯ್ ಕುಮಾರ

ಮುಂಬೈ, ಆ.8 : ಹಿಟ್ ಸಿನಿಮಾಗಳ ಮೂಲಕ ಜಗತ್ತಿನಲ್ಲೇ ಅತ್ಯಧಿಕ ಸಂಪಾದಿಸುತ್ತಿರುವ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಬಾಲಿವುಡ್ ಹೀರೋ ಅಕ್ಷಯ್ ಕುಮಾರ. ಜನಪ್ರಿಯತೆ, ಹಣ ತನಗೆ ಸುಖಾ ಸುಮ್ಮನೇ ಬರಲಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ‘ಮಿಷನ್ ಮಂಗಳ್’ ಸಿನಿಮಾ ಪ್ರಚಾರಕ್ಕಾಗಿ ಸಂದರ್ಶನ ನೀಡಿರುವ ಅವರು ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಸಿಕ್ಕಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಇಂತಹ ಸುದ್ದಿಯ ಶೀರ್ಷಿಕೆಗಳನ್ನು ಮಾತ್ರ ನೋಡುತ್ತೇನೆ, ಸುದ್ದಿಯನ್ನು ಓದಲ್ಲ. ಕೆಲವು ವರ್ಷಗಳ ನನ್ನ ಶ್ರಮದಿಂದಾಗಿ ಇದು ಸಾಧ್ಯವಾಗಿದೆ ಎಂದಿದ್ದಾರೆ.

“ಈಗ ನನ್ನ ಕೈಯಲ್ಲಿ ಇರುವ ಪ್ರತಿ ರೂಪಾಯಿಗಾಗಿ ನಾನು ಸಾಕಷ್ಟು ಕಷ್ಟಪಟ್ಟಿದ್ದೇನೆ. ಹಣ ಯಾರಿಗೂ ಅಷ್ಟು ಸುಲಭವಾಗಿ ಬರಲ್ಲ. ಇದಕ್ಕಾಗಿ ನಾನು ನನ್ನ ರಕ್ತವನ್ನು, ಶ್ರಮವನ್ನು ಧಾರೆ ಎರೆದಿದ್ದೇನೆ. ಹಾಗಾಗಿ ಅದರ ಬೆಲೆ ನನಗೆ ಗೊತ್ತು” ಎಂದಿದ್ದಾರೆ ಅಕ್ಕಿ.

ಫ್ರೆಶ್ ನ್ಯೂಸ್

Latest Posts

Featured Videos