ನಟಿ ಲಕ್ಷ್ಮೀ ರೈ ಬೇಸರ

ನಟಿ ಲಕ್ಷ್ಮೀ ರೈ ಬೇಸರ

ಬೆಳಗಾವಿ, ಆ. 13 : ಉತ್ತರ ಕರ್ನಾಟಕದಲ್ಲಿ ಜಲ ಪ್ರವಾಹ ಹಿನ್ನಲೆ ಬಹುಭಾಷೆ ನಟಿ ಲಕ್ಷ್ಮೀ ರೈ ಬೇಸರ ವ್ಯಕ್ತ ಪಡಿಸಿದ್ದಾರೆ. ಗುರುಪ್ರಸಾದ್ ನಿರ್ದೇಶನ ಹಾಗೂ ರಾಜೇಶ್ ಕುಮಾರ್ ನಿರ್ಮಾಣದ ‘ಝಾನ್ಸಿ’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಪ್ರವಾಹ ಅಲ್ಲಿನ ಜನರ ಪರಿಸ್ಥಿತಿ ನೋಡಿ ನಾನು ಬಾವುಕಳಾದೆ. ಬೆಳಗಾವಿ ನನ್ನೂರು ಅಲ್ಲಿನ ಜನರ ಕಷ್ಟಕ್ಕೆ ಸ್ಪಂದಿಸುವುದಾಗಿ ಹೇಳಿದ್ದಾರೆ. ಈಗಾಗಲೇ ನೆರೆ ಸಂತ್ರಸ್ತರಿಗೆ ನನ್ನಿಂದಾದ ಸಹಾಯ ಮಾಡಿದ್ದೇನೆ. ನೀವು ಕೂಡ ನಿಮ್ಮಿಂದಾದ ಸಹಾಯ ಮಾಡಿದರೆ ಆ ಜನ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ’ ಅಂತ ಲಕ್ಷ್ಮೀ ರೈ ವಿನಂತಿಸಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos