ನವದೆಹಲಿ, ಆ.15 : ಕ್ರಿಕೆಟ್ ಅಧಿಕಾರಿಯೊಬ್ಬರನ್ನು ಹೀಗೆ ಅರ್ಧದಲ್ಲಿ ವಾಪಸು ಕರೆಸಿಕೊಳ್ಳುತ್ತಿರುವುದು ದೇಶದ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು. ಕೆರಿಬಿಯನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ದುರ್ವರ್ತನೆ ತೋರಿದ ಭಾರತ ಕ್ರಿಕೆಟ್ ತಂಡದ ಮ್ಯಾನೇಜರ್ (ಆಡಳಿತಾತ್ಮಕ ಪ್ರಬಂಧಕ) ಸುನೀಲ್ ಸುಬ್ರಹ್ಮಣ್ಯಂ ಅವರನ್ನು ಬಿಸಿಸಿಐ ಕೂಡಲೇ ವಾಪಸಾಗಲು ಸೂಚಿಸಿದೆ. ನನಗೆ ಕಿರಿಕಿರಿ ಮಾಡಬೇಡಿ!
ಜಲ ಸಂರಕ್ಷಣೆಯ ಸಂದೇಶ ಸಾರುವ ವೀಡಿಯೊ ಶೂಟಿಂಗ್ಗಾಗಿ ಆಟಗಾರರನ್ನು ಒದಗಿಸಬೇಕೆಂಬ ವಿನಂತಿಯೊಂದಿಗೆ ರಾಯಭಾರ ಕಚೇರಿ ಅಧಿಕಾರಿಗಳು ಸುನೀಲ್ ಸುಬ್ರಹ್ಮಣ್ಯಂ ಅವರನ್ನು ಸಂಪರ್ಕಿಸಿದ್ದರು. ಗಯಾನದ ಭಾರತೀಯ ಹೈಕಮಿಶನ್ನ ಹಿರಿಯ ಅಧಿಕಾರಿಯೊ ಬ್ಬರು ಸಹಕಾರ ಕೋರಿದಾಗ, ಸಂದೇಶ ಗಳನ್ನು ಕಳುಹಿಸಿ ನನಗೆ ಕಿರಿಕಿರಿ ಮಾಡ ಬೇಡಿ ಎಂದು ಸುಬ್ರಹ್ಮಣ್ಯಂ ಒರಟಾಗಿ ಉತ್ತರಿಸಿದ್ದರು.