ನನಗೆ ಇನ್ನು ರಾಜಕೀಯ ಬೇಡ – ತೇಜಸ್ವಿನಿ ಅನಂತ್ ಕುಮಾರ್

ನನಗೆ ಇನ್ನು ರಾಜಕೀಯ ಬೇಡ – ತೇಜಸ್ವಿನಿ ಅನಂತ್ ಕುಮಾರ್

ಬೆಂಗಳೂರು, ಮಾ. 29, ನ್ಯೂಸ್ ಎಕ್ಸ್ ಪ್ರೆಸ್: ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ತೇಜಸ್ವಿನಿ ಅನಂತಕುಮಾರ್ ಅವರಿಗೆ ಬಿಜೆಪಿ ಮುಖಂಡ ಮುರಳೀಧರರಾವ್ ಮನವಿ ಮಾಡಿದರು. ಈ ವೇಳೆ ತೇಜಸ್ವಿನಿ ಅವರು, ತಮಗೆ ಬೆಂಗಳೂರು ದಕ್ಷಿಣ ಲೋಕಸಭಾ ಟಿಕೆಟ್ ತಪ್ಪಿದ್ಯಾಕೆ..? ಅಂತ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮೊದಲು ಸ್ಪಷ್ಟಪಡಿಸಲಿ. ಅವರ ಉತ್ತರ ಒಪ್ಪಿಗೆಯಾದರೆ ಮಾತ್ರ ನಾವು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತೇವೆ ಎಂದು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ

ಇಲ್ಲಿ ಯಾರೂ ದೊಡ್ಡವರಲ್ಲ. ಯಾರ ಕಾಲಿಗೂ ಬೀಳುವ ಅಗತ್ಯವಿಲ್ಲ. ನನಗೆ ಇನ್ನು ರಾಜಕೀಯ ಬೇಡ. ಅದಮ್ಯ ಚೇತನದ ಸಮಾಜ ಸೇವಾ ಕಾರ್ಯಗಳನ್ನು ಮುಂದುವರಿಸುತ್ತೇವೆ ಎಂದು ತೇಜಸ್ವಿನಿ ಅನಂತ್ಕುೆಮಾರ್ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos