ಮುಂಬೈ, ಸೆ. 10 : ಶ್ರೀದೇವಿ ಹಿರಿಯ ಪುತ್ರಿ ಜಾಹ್ನವಿ ಕಪೂರ್ ತನ್ನ ಮದುವೆ ಬಗ್ಗೆ ಮಾತನಾಡಿದ್ದಾರೆ. ನಾನು ಸಾಂಪ್ರದಾಯಿಕವಾಗಿ ಮದುವೆಯಾಗಬೇಕೆಂದಿದ್ದೇನೆ. ತಿರುಪತಿಯಲ್ಲೇ ನನ್ನ ಮದುವೆ ನಡೆಯುತ್ತದೆ. ಮದುವೆಗೆ ದಕ್ಷಿಣ ಭಾರತದ ಅಡುಗೆ ಇರುತ್ತದೆ ಎಂದಿದ್ದಾರೆ.
ಪುರುಷರ ವಿಚಾರದಲ್ಲಿ ನನ್ನ ಆಲೋಚನೆ, ಅಭಿಪ್ರಾಯಗಳನ್ನು ನನ್ನ ತಾಯಿ ಶ್ರೀದೇವಿ ನಂಬುತ್ತಿರಲಿಲ್ಲ ಎಂದು ನಟಿ ಜಾಹ್ನವಿ ಕಪೂರ್ ಹೇಳಿದ್ದಾರೆ. ಧಡಕ್ ಸಿನಿಮಾ ಬಳಿಕ ಈ ಬೆಡಗಿ ಬಾಲಿವುಡ್ನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದು ಗೊತ್ತೇ ಇದೆ.
ಜಾಹ್ನವಿ ಕಪೂರ್ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಸಾಮಾಜಿಕ ಮಾಧ್ಯಮದಲ್ಲಿ ಜಾಹ್ನವಿಗೆ ಒಳ್ಳೆ ಫ್ಯಾನ್ ಫಾಲೋಯಿಂಗ್ ಇದೆ. ಇತ್ತೀಚೆಗೆ ಸಂದರ್ಶನ ನೀಡಿರುವ ಅವರು ಪುರುಷರ ಕುರಿತ ತನ್ನ ಅಭಿಪ್ರಾಯಗಳನ್ನು ಮನಬಿಚ್ಚಿ ಹಂಚಿಕೊಂಡಿದ್ದಾರೆ.