ಬೆಂಗಳೂರು: ಕೌಶಲ್ಯಾಭಿವೃದ್ದಿ ಇಲಾಖೆಯು ರಾಷ್ರ್ಟೀಯ ಜೀವನೋಪಾಯ ಅಭಿಯಾನದಡಿ ಮಹಿಳೆಯರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ 3ನೇ ಬಾರಿಗೆ ಇಂದಿನಿಂದ ಮಾರ್ಚ್ 9 ರವರೆಗೆ ಹತ್ತು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ “ನಮ್ಮ ಸರಸ್” ಕಾರ್ಯಕ್ರಮ ಉದ್ಘಾಟಿಸಿದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ ಶರಣಪ್ರಕಾಶ್ ಪಾಟೀಲ್ ಹೇಳಿದರು. ಮಾತನಾಡಿದ ಅವರು ಇಂದಿನ ಸಮಾಜದಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ.
ನಮ್ಮ ಸರ್ಕಾರ ಸದಾ ಮಹಿಳಾ ಪರವಾಗಿದ್ದು ಸರ್ಕಾರ ಘೋಷಿಸಿರುವ ೫ ಗ್ಯಾರಂಟಿಗಳು ಮಹಿಳಾ ಪ್ರಧಾನವಾಗಿವೆ. ಗೃಹಲಕ್ಷ್ಮಿ ಬಹಳ ಜನಪ್ರಿಯ ಯೋಜನೆಯಾಗಿದೆ. ಇನ್ನು ಎರಡನೇ ಮಹಿಳಾ ಪ್ರಧಾನ ಕಾರ್ಯಕ್ರಮ ಶಕ್ತಿ ಯೋಜನೆ. ಈ ಮೇಳಕ್ಕೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಬಸ್ ಮೂಲಕ ಬಂದಿದ್ದಾರೆ ಎಂದು ಭಾವಿಸುವೆ. ಇತರೆ ಗ್ಯಾರಂಟಿಗಳು ಸಹಾ ಮಹಿಳಾ ಸಬಲೀಕರಣದತ್ತ ನಮ್ಮ ಸರ್ಕಾರ ಹೊಂದಿರುವ ಗುರಿ ಎಂದರು.
ಇತ್ತೀಚಿಗೆ ಆಯೋಜಿಸಿದ್ದ ಯುವ ಸಮೃದ್ಧಿ ಸಮ್ಮೇಳನದಲ್ಲಿ 86000 ನೋಂದಣಿ ಅದರಲ್ಲಿ 36000ಮಹಿಳೆಯರು. ಇದರ ಅರ್ಥವೇನೆಂದರೆ ನಮ್ಮಲ್ಲಿರುವ ಟ್ಯಾಲೆಂಟ್‌ಪೂಲ್‌ನಲ್ಲಿ ಅರ್ಧದಷ್ಟು ಮಹಿಳೆಯರದ್ದಾಗಿದೆ ಎಂದರು. ಇಂದು ೪ ಲಕ್ಷ ಸ್ವಸಹಾಯ ಗುಂಪುಗಳಿದ್ದು 40 ಲಕ್ಷ ಮಹಿಳೆಯರು ಸ್ವಸಹಾಯ ಗುಂಪಿನ ಸದಸ್ಯರಾಗಿದ್ದಾರೆ.ಈವರೆಗೆ ಸುಮಾರು 1.5 ಲಕ್ಷ ಸುತ್ತು ನಿಧಿ ನೀಡಲಾಗಿದೆ. ಇನ್ನು 2 ಲಕ್ಷ ಸುತ್ತು ನಿಧಿ ನೀಡುವ ಗುರಿ ಸರ್ಕಾರಕ್ಕಿದೆ ಎಂದರು.
ಕಳೆದ ಬಾರಿ ಸುಮಾರು 3.5 ಕೋಟಿ ರೂಪಾಯಿಗಳ ವಹಿವಾಟಗಿದ್ದು ಈ ಬಾರಿ ಅದಕ್ಕೂ ಹೆಚ್ಚು ವಹಿವಾಟಾಗುವ ನಿರೀಕ್ಷೆ ಇದೆ ಎಂದರು. ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಮಾತನಾಡುತ್ತಾ, 20 ರಾಜ್ಯಗಳಿಂದ ಬಂದ ಸ್ವಸಹಾಯ ಗುಂಪಿನ ಮಹಿಳೆಯರು ತಮ್ಮ ಕೈಯಾರೆ ಮಾಡಿರುವ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಅವರನ್ನು ಉತ್ತೇಜಿಸುವ ಕೆಲಸ ನಮ್ಮ ಸರ್ಕಾರ ಮತ್ತು ಇಲಾಖೆ ಮಾಡುತ್ತಿದೆ ಎಂದರು.
ಸ್ವಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟದ ಮೂಲಕ ಸಾರ್ವಜನಿಕರಿಗೆ ಪರಿಚಯಿಸುವುದರೊಂದಿಗೆ ಮಹಿಳೆಯರನ್ನು ಆರ್ಥಿಕ ಸಬಲೀಕರಣದತ್ತ ಮುನ್ನಡೆಸುವ ಘನ ಉದ್ದೇಶ ಹೊಂದಿದೆ. ರಾಷ್ಟ್ರಮಟ್ಟದ ಈ ಮೇಳದಲ್ಲಿ ಸುಮಾರು ೨೫೦ ಮಳಿಗೆಗಳನ್ನು ಸ್ಥಾಪಿಸಲಾಗಿದೆ ಎಂದರು ಶ್ರೀವಿದ್ಯಾ, ಮಿಷನ್ ಡೈರೆಕ್ಟರ್ ಹೇಳಿದರು. ಸಾರ್ವಜನಿಕರು ಭೇಟಿ ನೀಡಿ ಸ್ವ ಸಹಾಯ ಗುಂಪಿನ ಉತ್ಪನ್ನಗಳನ್ನು ಖರೀದಿಸಿ ಬೆಂಬಲಿಸಬೇಕೆಂದು ಅವರು ಕೋರಿದರು.
ಇಲಾಖೆಯ ಹೆಚ್ಚುವರಿ ನಿರ್ದೇಶಕರು ಅರ್ಜುನ್ ಒಡೆಯರ್, ರಾಘವಿ ವಿನೋದ ನಾಯಕ್, ಯೋಜನಾ ಅಧಿಕಾರಿ, ಜಚಿಥಿ ಓಐಒ, ಅಪೇಕ್ಷಾ ಸತೀಶ್ ಪವಾರ್, ಮುಖ್ಯ ಕಾರ್ಯಾಚರಣೆ ಅಧಿಕಾರಿ ಮತ್ತು ಇತರರು ಹಾಜರಿದ್ದರು.
ಪಶ್ಚಿಮ ಬಂಗಾಳ, ತಮಿಳ್ ನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 150ಕ್ಕೂ ಹೆಚ್ಚು ಮಳಿಗೆಗಳನ್ನು ನಮ್ಮ ಸರಸ್ ಮೇಳದಲ್ಲಿ ಪ್ರದರ್ಶಿಸಲಾಗಿತ್ತು. ಕರಕುಶಲ ಉದ್ಯಮದ ವಸ್ತುಗಳು, ವಿವಿಧ ಖಾದ್ಯಗಳು, ಆಹಾರ ಮೌಲ್ಯವರ್ಧಕ ವಸ್ತುಗಳ ಮಳಿಗೆಗಳು ಜನರನ್ನು ಆಕರ್ಷಿಸಿದ್ದವು.
ಉತ್ತರ ಕರ್ನಾಟಕದ ಕುರಿ ಉಣ್ಣೆಯ ಉತ್ಪನ್ನಗಳಾದ ಶಾಲು, ಟೋಪಿ ಮತ್ತು ಇತರೆ ಪದಾರ್ಥಗಳು ಎಲ್ಲರ ಮನಸೆಳೆದಿತ್ತು. ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಉಮಾ ಮಹಾದೇವನ್ ಅವರು ಈ ಉತ್ಪನ್ನಗಳತ್ತ ಆಕರ್ಷತಾರಾಗಿ ಮೂಕವಿಸ್ಮಿತರಾದರು. ಅವರ ಮಳಿಗೆ ಮುಂದೆ ನಿಂತು ಆಕೆಯೊಂದಿಗೆ ಫೋಟೋಗೆ ಪೋಸ್ ನೀಡಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು.
ಅಕ್ಕ ಕೆಫೆ : ನಮ್ಮ ಸರಸ್ ಮೇಳದಲ್ಲಿ ಆಯಾ ರಾಜ್ಯದಲ್ಲಿ ಪ್ರಸಿದ್ಧವಾಗಿರುವ 20 ರಾಜ್ಯಗಳ ವಿವಿಧ ಬಗೆಯ ಖಾದ್ಯಗಳ ವಿಶೇಷ ಲೈವ್‌ಫುಡ್ ಕೋರ್ಟನ್ನು ವಿಶೇಷವಾಗಿತ್ತು. ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳ ಹೆಸರುವಾಸಿ ಖಾದ್ಯಗಳನ್ನು ಸ್ಥಳದಲ್ಲೇ ತಯಾರಿಸಿ ಮಾರಾಟ ಮಾಡುವ ಹಾಗೂ ಈ ಖಾದ್ಯಗಳನ್ನು ಸವಿಯಲು ಆಕರ್ಷಣೀಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಕ್ಕ ಕೆಫೆ ಮುಖಾಂತರ ಕರ್ನಾಟಕದ ಖಾದ್ಯಗಳನ್ನು ಪ್ರೋತ್ಸಾಹಿಸುವ ಕೆಲಸ ಸರಸ್ ಮೂಲಕ ನಡೆಯುತ್ತಿದೆ. ಮೇಳದ ವೇದಿಕೆಯಲ್ಲಿ ಪ್ರತಿದಿನ ಸಂಜೆ ವಿವಿಧ ಕಲಾತಂಡಗಳಿಂದ ಆಕರ್ಷಣೀಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.