ಮೊಟ್ಟೆಯೊಡೆದು ಹೊರ ಬಂದ ಹಾವುಗಳು!

ಮೊಟ್ಟೆಯೊಡೆದು ಹೊರ ಬಂದ ಹಾವುಗಳು!

ಬೆಂಗಳೂರು, ಮೇ. 14, ನ್ಯೂಸ್ ಎಕ್ಸ್  ಪ್ರೆಸ್ : ನಾಗರಹಾವಿನ ಮೊಟ್ಟೆಗಳಿಂದ ಬರೋಬ್ಬರಿ 16 ಮರಿಗಳು ಹೊರಬಂದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ನಡೆದಿದೆ.

ಕಳೆದ ಮೂರು ತಿಂಗಳ ಹಿಂದೆ ಹೆಸರಘಟ್ಟ ಗ್ರಾಮದಲ್ಲಿ ಮೊಟ್ಟೆಗಳನ್ನು ಸಂಗ್ರಹಿಸಿದ್ದೇನೆ. ಮೂರು ತಿಂಗಳ ಬಳಿಕ ಮೊಟ್ಟೆಯಿಂದ ಹಾವಿನ ಮರಿಗಳು ಹೊರಬಂದಿವೆ. ಹೆಸರಘಟ್ಟದ ನಾರಾಯಣ ಎಂಬವರ ಮನೆಯಲ್ಲಿ ನಾಗರಹಾವು ಮೊಟ್ಟೆ ಇಟ್ಟು ಹೋಗಿತ್ತು. ಇದನ್ನು ಗಮನಿಸಿದ ಮನೆ ಮಾಲೀಕ ನನಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ ಎಂದು ನೆಲಮಂಗಲದ ಉರಗ ತಜ್ಞ ಸ್ನೇಕ್ ಲೊಕೇಶ್ ಅವರು ಹೇಳಿದ್ದಾರೆ.“ನಾನು ಹೋಗಿ ನಾಗರಹಾವಿನ ಮೊಟ್ಟೆಗಳನ್ನು ತಂದು ನಮ್ಮ ಮನೆಯಲ್ಲಿ ಪೋಷಣೆ ಮಾಡುತ್ತಿದ್ದು, 16 ನಾಗರಹಾವಿನ ಮರಿಮಗಳು ಮೊಟ್ಟೆಯಿಂದ ಹೊರ ಬಂದಿವೆ. ಹಾವಿನ ಮರಿಗಳು ಸದ್ಯಕ್ಕೆ ಆರೋಗ್ಯವಾಗಿವೆ ಎಂದು ಲೋಕೇಶ್ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos