ನಾಪತ್ತೆಯಾದ ಇಲಿ ಹುಡುಕಿಕೊಟ್ಟ ಪೊಲೀಸರು.!

ನಾಪತ್ತೆಯಾದ ಇಲಿ ಹುಡುಕಿಕೊಟ್ಟ ಪೊಲೀಸರು.!

ಕ್ಯಾನ್ಬೆರಾ, . 22 ನ್ಯೂಸ್ ಎಕ್ಸ್ ಪ್ರೆಸ್: ಜಗತ್ತಿನಲ್ಲಿ ಪ್ರಾಣಿಯನ್ನು ಸಾಕುವುದು ಸಾಮನ್ಯದ ಮಾತು ಆದರೆ,  ಒಬ್ಬಅನಾಥ ವ್ಯಕ್ತಿಯು ಒಂದು ಮುದ್ದಾದ ಇಲಿ ಮರಿಯನ್ನು ಸಾಕಿದ್ದ. ತಾನು ಸಾಕಿದ್ದ ಇಲಿ ಮರಿ ಇದ್ದಕ್ಕಿದ್ದಂತೆ ನಪತ್ತೆಯಾಗಿತ್ತು. ಇದರಿಂದ ಚಿಂತೆಗೀಡಾದ ಆ ವೃದ್ಧನ ಮುದ್ದಿನ ಇಲಿಯನ್ನು ಹುಡುಕಾಟ ಆರಂಭಿಸಿದ್ದ.  ಇದನ್ನು ಗಮನಿಸಿದ ಪೊಲೀಸರು ಕೊನೆಗೂ ಆ ವೃದ್ಧ ಸಾಕಿದ್ದ ಇಲಿ ಮರಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ವೃದ್ಧನಿಗೆ ತಲುಪಿಸಿದ್ದಾರೆ. ತನ್ನ ಮುದ್ದಿನ ಇಲಿ ಮರಿಯನ್ನು ಕಂಡ ಆ ವೃದ್ಧನ ಖುಷಿ ಹೇಳತೀರದು.

ಈ ಅನಾಥ ವೃದ್ಧ ಸಾಕಿದ್ದ ಇಲಿ ಮರಿ ಕಳೆದ 1 ವಾರದಿಂದ ನಾಪತ್ತೆಯಾಗಿತ್ತು. ಸದ್ಯ ಇದನ್ನು ಪತ್ತೆ ಹಚ್ಚಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಈ ಘಟನೆ ಏ. 6ರಂದು ನಡೆದಿದೆ. ಮಧ್ಯಾಹ್ನ ಸುಮಾರು 2 ಗಂಟೆಗೆ ಅನಾಥ ವೃದ್ಧ ತಾನು ಸಾಕಿದ್ದ ಇಲಿ ಮರಿಯನ್ನು ಬಾಕ್ಸ್ ಒಂದರಲ್ಲಿ ಹಾಕಿ ನಡೆದುಕೊಂಡು ಹೋಗುತ್ತಿದ್ದ. ಹೀಗಿರುವಾ ದಾರಿ ಮಧ್ಯೆ ಸಾಕು ಇಲಿಯನ್ನು ರಸ್ತೆ ಬದಿಯಲ್ಲಿಟ್ಟು, ಶೌಚಾಲಯಕ್ಕೆ ತೆರಳಿದ್ದಾನೆ. ಇದೇ ವೇಳೆ ರಸ್ತೆ ಬರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಆ ಇಲಿಯನ್ನು ನೋಡಿದ್ದಾಳೆ. ಯಾರೋ ಇಲಿಯನ್ನು ಬೇಕೆಂದೇ ಬಿಟ್ಟು ಹೋಗಿದ್ದಾರೆಂದು ತನ್ನ ಮನೆಗೆ ಕರೆದೊಯ್ದಿದ್ದಾಳೆ. ಇತ್ತ ವೃದ್ಧ ಹೊರ ಬಂದಾಗ ತನ್ನ ಸಾಕು ಇಲಿ ನಾಪತ್ತೆಯಾಗಿರುವುದನ್ನು ಕಂಡು ಪೊಲೀಸ್ ಠಾಣಡಗೆ ತೆರಳಿದ್ದಾರೆ ಹಾಗೂ ತಾವೂ ಹುಡುಕಾಟ ಆರಂಭಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos