ಕೊಪ್ಪಳ: ಗಣೇಶ ಚತುರ್ಥಿ ಬಂತೆಂದರೆ ಸಾಕು ಕೆಲವು ಕಡೆ ಗಲಾಟೆ, ಗಲಭೆಗಳು ನಡೆಯುತ್ತವೆ. ಇದರ ಮಧ್ಯಯೂ ಕೂಡ ಕೊಪ್ಪಳ ಜಿಲ್ಲೆ, ಕುಷ್ಟಗಿ ತಾಲೂಕು ಹನಮಸಾಗರ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆ ಮೆರೆದು ಮಸೀದಿ ಆವರ್ಣದಲ್ಲಿ ಗಣೇಶನನ್ನು ಕೂರಿಸಿ ನಾವೆಲ್ಲರೂ ಒಂದೇ ಎಂಬುವ ಭಾವೈಕ್ಯತೆಯನ್ನು ಮೆರೆದಿದ್ದಾರೆ. ಇದನ್ನೂ ಓದಿ: ಝೈದ್ ಖಾನ್ ನಟನೆಯ ಚಿತ್ರಕ್ಕೆ ಮಲೈಕಾ ನಾಯಕಿ
ಈ ಗ್ರಾಮದಲ್ಲಿ ಕಳೆದ 3 ವರ್ಷಗಳಿಂದ ಮಸಿದಿಯ ಆವರಣದಲ್ಲಿ ಹಿಂದೂ ಮುಸ್ಲಿಂ ಸಮುದಾಯದವರಿಂದ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. 5 ದಿನಗಳ ಕಾಲ ಗಣೇಶ ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯಗಳನ್ನ ನಡೆಸಲಾಗುತ್ತದೆ, 4ನೇ ದಿನ ಅನ್ನಸಂತರ್ಪಣೆ ಸೇರಿ ವಿವಿಧ ಕಾರ್ಯಕ್ರಮಗಳೂ ಸಹ ಆಯೋಜನೆ ಮಾಡಲಾಗುತ್ತದೆ, ಹಬ್ಬದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಗ್ರಾಮಗಳಿಂದಲೂ ಹಿಂದು-ಮುಸ್ಲಿಮರು ಹನುಮಸಾಗರ ಗ್ರಾಮಕ್ಕೆ ಭೇಟಿ ನೀಡುತ್ತಾರೆ.
ಗಣೇಶ ಹಬ್ಬವಷ್ಟೇ ಅಲ್ಲ, ಇಡೀ ಗ್ರಾಮವು ವರ್ಷವಿಡೀ ಎರಡೂ ಧರ್ಮಗಳ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುತ್ತಾರೆ. ಯುವಕರಿಗೆ ಗ್ರಾಮದ ಹಿರಿಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮಾರ್ಗದರ್ಶನ ನೀಡುತ್ತಾರೆ. ಅಕ್ಕಪಕ್ಕದ ಗ್ರಾಮಗಳು, ಗದಗ ಮತ್ತು ವಿಜಯನಗರ ಜಿಲ್ಲೆಗಳ ಜನರು ಕೂಡ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ.
ಅದೇನೇ ಆಗಲಿ ಜಾತಿ, ಜಾತಿ ಎಂದು ಬಡಿದಾಡುಕೊಂಡು ಸಾಯುತ್ತಿರುವ ಈ ಕಾಲದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಗಣೇಶ ಹಬ್ಬವನ್ನು ಆಚರಿಸುವುದು ಹೆಮ್ಮೆಯ ಸಂಗತಿ.