ಯುವ ಬಿಜೆಪಿ ಕಾರ್ಯಕರ್ತನ ಕೊಲೆ.!

ಯುವ ಬಿಜೆಪಿ ಕಾರ್ಯಕರ್ತನ ಕೊಲೆ.!

ಪಶ್ಚಿಮ ಬಂಗಾಲ, ಮೇ. 25, ನ್ಯೂಸ್ ಎಕ್ಸ್ ಪ್ರೆಸ್: ಇಂದು ಪಶ್ಚಿಮ ಬಂಗಾಲದ ನಾದಿಯಾ ಜಿಲ್ಲೆಯಲ್ಲಿ 23 ವರ್ಷದ ಬಿಜೆಪಿ ಕಾರ್ಯಕರ್ತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಛಕ್ ದಾಹಾ ಪಟ್ಟಣದಲ್ಲಿ ಈ ಘಟನೆ ನಡೆಯಿತು.

ಚಕ್ ದಾಹಾ ಪಟ್ಟಣದ ತಪಬನ್ ಪ್ರದೇಶದ ನಿವಾಸಿ, 23ರ ಹರೆಯದ ಸಂತು ಘೋಷ್, ತನಗೆ ಫೋನ್ ಕರೆ ಬಂದುದನ್ನು ಅನುಸರಿಸಿ ಮನೆಯಿಂದ ಹೊರಗೆ ಹೋದಾಗ ಆತನನ್ನು ಅತ್ಯಂತ ಸನಿಹದಿಂದ ಗುಂಡಿಟ್ಟು ಕೊಲ್ಲಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ ಸಂತು ಘೋಷ್ ನನ್ನು ತಕ್ಷಣ ಛಕ್ದಾಹಾ ಸರಕಾರಿ ಅಸ್ಪತ್ರೆಗೆ ಒಯ್ಯಲಾಯಿತಾದರೂ ಆತ ಅದಕ್ಕೆ ಮೊದಲೇ ಪ್ರಾಣ ಬಿಟ್ಟದ್ದ ಎಂದು ವೈದ್ಯರು ಪ್ರಕಟಿಸಿದರು.

ಘಟನೆಯನ್ನು ಅನುಸರಿಸಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 34ರಲ್ಲಿ ರಾಸ್ತಾ ರೋಕೋ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರು ನಾದಿಯಾ ಜಿಲ್ಲೆಯ ಅನೇಕ ಕಡೆಗಳಲ್ಲಿ ರೈಲು ಹಳಿಗಳನ್ನು ಕೂಡ ಬ್ಲಾಕ್ ಮಾಡಿದರು. ಪೊಲೀಸರು ಕೊಲೆ ಕೇಸು ದಾಖಲಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos