ಗಂಡನನ್ನೆ ಕೊಂದ ಹೆಂಡತಿ.?

ಗಂಡನನ್ನೆ ಕೊಂದ ಹೆಂಡತಿ.?

ಮಂಡ್ಯ, ಮೇ. 31, ನ್ಯೂಸ್ ಎಕ್ಸ್ ಪ್ರೆಸ್: ಇತ್ತಿಚಿಗೆ ಜಗತ್ತಿನಲ್ಲಿ  ಕೊಲೆ ಸುಲುಗೆ ಹೆಚ್ಚಾಗುತ್ತಿದೆ ಹೌದು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತ್ನಿಯೊಬ್ಬಳು  ತನ್ನಪತಿಯನ್ನ ಬರ್ಬರವಾಗಿ ಕೊಂದು ತಾನೇ ಪತಿ ಕಾಣೆಯಾಗಿದ್ದಾನೆ ಅಂತ ದೂರು ದಾಖಲಿಸಿದ್ದಾಳೆ.

ಈ ಘಟನೆ ಮಂಡ್ಯ ಜಿಲ್ಲೆ ಅರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸತೀಶ್ ಪತ್ನಿಯಿಂದ ಕೊಲೆಯಾದ ವ್ಯಕ್ತಿ. ತನ್ನ ಪ್ರಿಯಕರನ ಜೊತೆಗೆ ಸೇರಲು ಪತ್ನಿಗೆ ಪತಿ ತಡೆಯುತ್ತಿದ್ದ ಕಾರಣ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿ ಗ್ರಾಮದ ಹೊರವಲಯದಲ್ಲಿ ಮೃತದೇಹ ಹೂತು ಹಾಕಿದ್ದಾರೆ. ನಂತರ ನನ್ನ ಗಂಡ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡುವ ನಾಟಕವಾಡಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ ಪತ್ನಿ ಮೇಲೆ ಅನುಮಾನ ಬಂದಿದೆ. ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ವಿಚಾರಣೆ ನಡೆಸಿದಾಗ ಇಬ್ಬರು ಸತ್ಯಾಂಶ ಬಾಯ್ಬಿಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos