ಮುದ್ದೇಬಿಹಾಳ, ಜೂ. 29 : ಶಿಥಿಲಗೊಂಡ ಶಾಲೆಯ ಕೊಠಡಿಗಳಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದ್ದು, ಕೊಠಡಿಗಳನ್ನು ರಿಪೇರಿ ಅಥವಾ ಮರು ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ತಾಲೂಕಿನ ಬಾವೂರ ಗ್ರಾಮಸ್ಥರು ಬಿಇಒ ಎಸ್.ಡಿ. ಗಾಂಜಿಗೆ ಮನವಿ ಮಾಡಿದರು. ಮಳೆ ಸುರಿದು ಶಾಲೆಯೊಳಗೆ ನೀರು ಆವರಿಸಿದ ಕುರಿತು ಗ್ರಾಮಸ್ಥರ ದೂರು ನೀಡಿದ ಹಿನ್ನೆಲೆ ಬಿಇಒ ಗಾಂಜಿ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಶಿಥಿಲ ಕೊಠಡಿಗಳಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿದೆ.
ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಭಯದಲ್ಲೇ ಶಿಕ್ಷಣ ಕಲಿಸುವ ದಯನೀಯ ಸ್ಥಿತಿ ಸೃಷ್ಟಿಯಾಗಿದೆ ಎಂದು ತಿಳಿಸಿದರು.