ಮುದ್ದಹನುಮೇಗೌಡರಿಗೆ ಸೂಕ್ತ ಸ್ಥಾನ-ಮಾನ: ದಿನೇಶ್ ಗುಂಡೂರಾವ್ ಭರವಸೆ

ಮುದ್ದಹನುಮೇಗೌಡರಿಗೆ ಸೂಕ್ತ ಸ್ಥಾನ-ಮಾನ: ದಿನೇಶ್ ಗುಂಡೂರಾವ್ ಭರವಸೆ

ತುಮಕೂರು, ಮಾ.29, ನ್ಯೂಸ್ ಎಕ್ಸ್ ಪ್ರೆಸ್: ಮುದ್ದಹನುಮೇಗೌಡರಿಗೆ ಅನ್ಯಾಯವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ, ಆದರೆ ಹೈಕಮಾಂಡ್ ನಿರ್ಧಾರ ತೆಗೆದುಕೊಂಡಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಇಂದು ದಿನೇಶ್ ಗುಂಡೂರಾವ್ ಮತ್ತು ಪರಮೇಶ್ವರ್ ಅವರು ಮುದ್ದಹನುಮೇಗೌಡ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮುದ್ದಹನುಮೇಗೌಡ ಅವರು, ದೇಶದಲ್ಲಿ ಮೋದಿ ಅಲೆ ಇದ್ದಾಗ ಸಹ ಭಾರಿ ಅಂತರದಿಂದ ಗೆದ್ದು ಬಂದಿದ್ದರು, ಅವರು ಕೆಲಸ ಮಾಡಿ ಜನಮನ್ನಣೆ ಗಳಿಸಿದ ಗೌರವಾನ್ವಿತ ಸಂಸದರಾಗಿದ್ದರು, ಅವರಿಗೆ ಟಿಕೆಟ್ ಸಿಗದೇ ಇರುವುದು ನಮಗೂ ಬೇಸರವಾಗಿದೆ ಎಂದು ಗುಂಡೂರಾವ್ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos