ಬೆಂಗಳೂರು, ಅ.8 : ಉಪ ಚುನಾವಣೆಯಲ್ಲಿ 10 ಸೀಟ್ ಗೆದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಮತ್ತೆ ಸಿದ್ದರಾಮಯ್ಯ ಅವರು ಸಿಎಂ ಆಗುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಬೈರತಿ ಸುರೇಶ್ ಅವರು ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಇಂಟಲಿಜೆನ್ಸ್ ರಿಪೋರ್ಟ್ ಈಗಾಗಲೇ 12 ಸೀಟ್ ಕಾಂಗ್ರೆಸ್ ಗೆಲ್ಲುತ್ತದೆ. 70 ವರ್ಷದ ಹಿರಿಯರು ಕೀಳು ಭಾಷೆ ಮಾತನಾಡುವುದು ಸರಿಯಲ್ಲ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರಿಗೆ ಟಾಂಗ್ ನೀಡಿದರು.
ಕಾಂಗ್ರೆಸ್ನಿಂದ ಎಂಟಿಬಿ ಎಲ್ಲಾ ರೀತಿಯಲ್ಲಿ ಅನುಕೂಲ ಮಾಡಿಕೊಂಡು ಹೋಗಿದ್ದಾರೆ. ಕೊಚ್ಚೆ ಮೇಲೆ ಕಲ್ಲು ಹಾಕಿ ಮುಖಕ್ಕೆ ಎಗರಿಸಿಕೊಳ್ಳೊಕೆ ಹೋಗಲ್ಲ. ಸಿದ್ರಾಮಯ್ಯ ಸಾವಿರಾರು ಕೋಟಿ ಅನುದಾನ ನೀಡಿ ಅಭಿವೃದ್ಧಿ ಮಾಡಿದ್ದಾರೆ. ಎಂಟಿಬಿ ಇದನ್ನು ನಾನು ಕೊಟ್ಟೆ ಅಂತಿದ್ದಾರೆ ಎಂದು ಅವರು ಎಂಟಿಬಿ ವಿರುದ್ಧ ವಾಗ್ದಾಳಿ ನಡೆಸಿದರು. ಎಂಟಿಬಿ, ಬೈರತಿ ಬಸವರಾಜು, ಎಲ್ಲರೂ ಎ.ಕೃಷ್ಣಪ್ಪ ಅವರ ಹಾದಿಯಲ್ಲಿ ಬೆಳೆದವರು ಎಂದು ಅವರು ಹೇಳಿದರು.