ಲೋಕಸಭಾ ಚುನಾವಣೆ: ಬಿಬಿಎಂಪಿಯಿಂದ ಜಾಹೀರಾತು ಫಲಕ ತೆರವು

ಲೋಕಸಭಾ ಚುನಾವಣೆ: ಬಿಬಿಎಂಪಿಯಿಂದ ಜಾಹೀರಾತು ಫಲಕ ತೆರವು

ಬೆಂಗಳೂರು, ಮಾ.11, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಾಹೀರಾತು ಫಲಕಗಳ ತೆರವು ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದೆ.

ಮಾದರಿ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಜಾಹೀರಾತು ಮತ್ತು ಇತರೆ ಪ್ರಚಾರ ಸಾಮಗ್ರಿಗಳ ತೆರವು ಜವಾಬ್ದಾರಿಯನ್ನು ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ವಹಿಸಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಲೋಕಸಭಾ ಚುನಾವಣಾ ದಿನಾಂಕ ಪ್ರಕಟಿಸುತ್ತಿದ್ದಂತೆ, ಬಿಬಿಎಂಪಿ ಆಯಕ್ತ ಮಂಜುನಾಥ್ ಪ್ರಸಾದ್, ನಗರಾದ್ಯಂತ ಇರುವ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ಎಲ್ಲ ರೀತಿಯ ಜಾಹೀರಾತುಗಳು, ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಿ ಬೆಳಗ್ಗೆ ವರದಿ ನೀಡುವಂತೆ ಪಾಲಿಕೆಯ ಎಲ್ಲಾ ವಲಯಗಳ ಮುಖ್ಯ ಎಂಜಿನಿಯರ್, ಕಾರ್ಯಪಾಲಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

ಈ ಸೂಚನೆ ಹಿನ್ನೆಲೆಯಲ್ಲೇ ಎಲ್ಲಾ ಎಂಟೂ ವಲಯಗಳಲ್ಲಿ ಭಾನುವಾರ ರಾತ್ರಿಯಿಂದಲೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos