ತುಮಕೂರು, ಅ. 25 : ದೇಶ ಅಭಿವೃದ್ಧಿ ಮಾಡುವ ಒಳ್ಳೆ ಅಜೆಂಡಾ ಇಟ್ಟುಕೊಂಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ಹೊಗಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರು ದೇಶದ ಬಗ್ಗೆ ಒಳ್ಳೆ ದೃಷ್ಟಿಕೋನ ಇಟ್ಟುಕೊಂಡಿದ್ದಾರೆ ಆದರೆ ಬಿಜೆಪಿಯಲ್ಲಿನ ಕೆಲ ಮುಖಂಡರಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ. ಮಾಜಿ ಶಾಸಕ ಸುರೇಶ್ ಗೌಡ ಅವರಂತಹ ಮುಖಂಡರಿಂದ ಬಿಜೆಪಿಗೆ ಹಾನಿಯಾಗುತ್ತಿದೆ ಎಂದು ಅವರು ಹೇಳಿದರು.
ಸುರೇಶ್ ಗೌಡ ಅವರಂತವರನ್ನು ಪಕ್ಷದಿಂದ ದೂರ ಇಡಿ, ಅಭಿವೃದ್ಧಿ ಕಾಮಗಾರಿಗೆ ಬಿಡುಗಡೆಯಾದ ಹಣ ತಡೆ ಹಿಡಿಯುವಂತೆ ಸುರೇಶ್ ಗೌಡ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದ ೪೨ ಕೋಟಿ ರೂಪಾಯಿ ಮುಖ್ಯಮಂತ್ರಿ ತಡೆ ಹಿಡಿದಿದ್ದಾರೆ ಎಂದು ಗೌರಿ ಶಂಕರ್ ಅವರು ಸುರೇಶ್ ಗೌಡ ಅವರು ಬರೆದ ಪತ್ರ ಬಹಿರಂಗಪಡಿಸಿದರು.