ಮೋದಿ ಶುಚಿತ್ವ ಫೋಟೋ ವೈರಲ್

ಮೋದಿ ಶುಚಿತ್ವ ಫೋಟೋ ವೈರಲ್

ನವದೆಹಲಿ, ಅ. 13 : ತಮಿಳುನಾಡಿನ ಮಮಲ್ಲಾಪುರಂನಲ್ಲಿ ಸಮುದ್ರ ದಂಡೆಯಲ್ಲಿ ಕಸ ಹೆಕ್ಕಿ ಶುಚಿತ್ವ ಮಾಡಿದ ಫೋಟೋ, ವಿಡಿಯೋ ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ. ಚರ್ಚೆ ಶುರುವಾಗಿದೆ. ಈ ಫೋಟೋಗಳು ಶೋ ಆಫ್ ಗಾಗಿಯೇ? ಇದು ಎಡಿಟ್ ಮಾಡಿದ ಫೋಟೋ ಇರಬೇಕು. ಶುಚಿತ್ವ ಮಾಡಿದರೆ ಅದನ್ನು ಫೋಟೋ ಹಾಕಿ ಪೋಸ್ ಕೊಡೋದು ಯಾಕೆ? ನೀವು ಸಾಮಾಜಿಕ ಕೆಲಸ ಮಾಡುವಲ್ಲೆಲ್ಲಾ ಕ್ಯಾಮರಾ ಮೆನ್ ಗಳನ್ನು ಕೊಂಡೊಯ್ಯುತ್ತೀರಾ ಎಂದು ಕೆಲವರು ಕಾಲೆಳೆದಿದ್ದಾರೆ.

ಆದರೆ, ಅಪ್ಪಟ ಮೋದಿ ಅಭಿಮಾನಿಗಳು ಈ ರೀತಿ ಕಾಲೆಳೆದ ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ರೀತಿ ಅವರು ಶುಚಿ ಮಾಡಿದ ಫೋಟೋ ನೋಡಿದ ಮೇಲಾದರೂ ಕೆಲವರು ಶುಚಿತ್ವದ ಮಹತ್ವ ತಿಳಿದುಕೊಳ್ಳಬಹುದಲ್ಲವೇ ಎಂದು ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲ, ಮತ್ತೆ ಕೆಲವರು ಮೋದಿ ಟಿ ಶರ್ಟ್ ನಲ್ಲಿ ಮಿಂಚಿರುವುದನ್ನು ನೋಡಿ ನಿಮಗೆ ಈ ಡ್ರೆಸ್ ಚೆನ್ನಾಗಿ ಒಪ್ಪುತ್ತದೆ. ನೀವು ತುಂಬಾ ಯಂಗ್ ಆಗಿ ಕಾಣುತ್ತಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos