ಮೋದಿ ಪರ ವಾಲ್ತಾರಾ ಓಡಿಶಾ ಸಿಎಂ..?

ಮೋದಿ ಪರ ವಾಲ್ತಾರಾ ಓಡಿಶಾ ಸಿಎಂ..?

ಭುವನೇಶ್ವರ್, ಮೇ. 16, ನ್ಯೂಸ್ಎಕ್ಸ್ ಪ್ರೆಸ್‍: ಒಡಿಶಾದಲ್ಲಿ ವಿಧಾಸಭೆ ಹಾಗೂ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಡಿಶಾ ಸಿಎಂ ಹಾಗೂ ಬಿಜೆಡಿ ಮುಖ್ಯಸ್ಥರಾಗಿರೋ ನವೀನ್ ಪಟ್ನಾಯಕ್ ಮತ್ತು ಪ್ರಧಾನಿ ಮೋದಿ ಪರಸ್ಪರ ರಾಜಕೀಯ ಕೆಸರೆರೆಚಾಟಕ್ಕೆ ಸಾಕ್ಷಿಯಾಗಿದ್ದರು.

ಆದರೆ, ಫಣಿ ಚಂಡಮಾರುತ ಒಡಿಶಾಗೆ ಕಾಲಿಟ್ಟಾಗ ಮೋದಿ ತಕ್ಷಣವೇ 1000 ಕೋಟಿ ರೂ. ನೀಡಿದ್ದಾರೆ. ವೈಮಾನಿಕ ಸಮೀಕ್ಷೆ ನಡೆಸಿದ ಮೋದಿ,14 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಚಂಡಮಾರುತ ನಿಭಾಯಿಸುವಲ್ಲಿ ಪಟ್ನಾಯಕ್ ಸಫಲರಾಗಿದ್ದಾರೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲಾ ರೀತಿಯ ಮೂಲ ಸೌಕರ್ಯ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ತೀವ್ರವಾದ ‘ಫಣಿ’ ಚಂಡಮಾರುತದ ಪರಿಣಾಮ ನಿಭಾಯಿಸಲು ಕೇಂದ್ರ ಸರ್ಕಾರ ಕೊಟ್ಟ ಬೆಂಬಲಕ್ಕೆ ಕೃತಜ್ಞತೆ ಎಂದು ಪಟ್ನಾಯಕ್ ಮೋದಿಗೆ ಪತ್ರ ಬರೆದಿದ್ದಾರೆ. ಮೇ 23ರಂದು ಪ್ರಧಾನಿ ಮೋದಿ ಸಂಕಷ್ಟದ ಸಮಯದಲ್ಲಿ ನಿಂತರೆ ಆಗ ನವೀನ್ ಪಟ್ನಾಯಕ್ ಮೋದಿ ಕೈ ಹಿಡಿದು ಸಾಗಲಿದ್ದಾರೆಯೇ ಎಂಬ ಪ್ರಶ್ನೆ ದೆಹಲಿ ಹಾಗೂ ಒಡಿಶಾದ ರಾಜಕೀಯದಲ್ಲಿ ಸದ್ದು ಮಾಡುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos