ರಿಯಾದ್, ನ. 8 : ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಶ್ರೇಷ್ಠ ನಾಯಕರಲ್ಲಿ ಒಬ್ಬರು ಎಂದು ಅಮೆರಿಕದ ಶತಕೋಟ್ಯಧಿಪತಿ ಹಾಗೂ ಪ್ರಭಾವಿ ಹೂಡಿಕೆದಾರರಲ್ಲಿ ಒಬ್ಬರಾದ ರೇ ಡ್ಯಾಲಿಯೋ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಸೌದಿ ಅರೇಬಿಯಾದ ರಿಯಾದ್ನಲ್ಲಿ ನಡೆದ ಹೂಡಿಕೆದಾರರ ಸಮಾವೇಶಲ್ಲಿ ಪ್ರಧಾನಿಯೊಂದಿಗೆ ಚರ್ಚೆ ನಡೆಸಿದ್ದ ರೇ ಡ್ಯಾಲಿಯೋ, ಮೋದಿ ಬಗ್ಗೆ ಟ್ವಿಟರ್ನಲ್ಲಿ ಪ್ರಶಂಸೆಗಳ ಸುರಿಮಳೆಗೈದಿದ್ದಾರೆ.
“ನನ್ನ ಅಭಿಪ್ರಾಯದಂತೆ ಭಾರತ ಪ್ರಧಾನ ಮಂತ್ರಿ ಶ್ರೇಷ್ಠ ವ್ಯಕ್ತಿ. ಬರೀ ಶ್ರೇಷ್ಠ ವ್ಯಕ್ತಿಯಲ್ಲ, ಜಗತ್ತಿನ ಶ್ರೇಷ್ಠ ನಾಯಕರಲ್ಲಿ ಒಬ್ಬರು” ಎಂದು ಬ್ರಿಡ್ಜ್ವಾಟರ್ ಅಸೋಸಿಯೇಟ್ಸ್ ಸಂಸ್ಥಾಪಕರು, ಸಹ-ಅಧ್ಯಕ್ಷ ಮತ್ತು ಸಹ-ಮುಖ್ಯ ಹೂಡಿಕೆ ಅಧಿಕಾರಿ ರೇ ಡ್ಯಾಲಿಯೋ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ರಿಯಾದ್ನಲ್ಲಿ ನಡೆದ ಭವಿಷ್ಯದ ಹೂಡಿಕೆ ಉಪಕ್ರಮ(ಎಫ್ಐಐ) ಸಮಾವೇಶದಲ್ಲಿ ಮೋದಿಯೊಂದಿಗೆ ಚರ್ಚೆ ನಡೆಸಿದ್ದ ದೃಶ್ಯಾವಳಿಯನ್ನು ಹಂಚಿಕೊಂಡಿದ್ದಾರೆ.