ನವದೆಹಲಿ, ಜು.2 : ಪ್ರಧಾನಿಗಳಿಗೆ ನನ್ನ ಮಾತನ್ನು ಕೇಳುವ ಆಸಕ್ತಿ ಇಲ್ಲ ಎಂದು ಹಿರಿಯ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಪ್ರಧಾನಿಗಳ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿರುವ ಸ್ವಾಮಿ ಚೀನಾದ ಪ್ರಸಿದ್ದ ತ್ರಿಂಪುವಾ ವಿಶ್ವವಿದ್ಯಾನಿಲಯ ಎಂಬ ವಿಚಾರದ ಕುರಿತು ಮಾತನಾಡಲು ನನಗೆ ಆಹ್ವಾನ ನೀಡಿದೆ. ಈ ವರ್ಷ ಸಪ್ಟೆಂಬರ್ ನಲ್ಲಿ ಚೀನಾದ ವಿದ್ವಾಂಸರ ಸಭೆ ನಡೆಯಲಿದೆ. ಭಾರತದಲ್ಲಿ ನಮೋ ನನ್ನ ಅಭಿಪ್ರಾಯ ಕೇಳಲು ಆಸಕ್ತರಾಗಿಲ್ಲದ ಕಾರಣ ನಾನು ಚೀನಾಗೆ ತೆರಳಬಹುದು” ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ನನ್ನ ಮಾತುಗಳನ್ನು ಕೇಳುತ್ತಿಲ್ಲ.‘’ನಾನು ಚೀನಾಗೆ ತೆರಳುವೆ. ಚೀನಾದಲ್ಲಿ ನಡೆಯುವ ವಿದ್ವಾಂಸರ ಸಭೆಗೆ ನನಗೆ ಆಹ್ವಾನ ಬಂದಿದೆ, ಹಾಗಾಗಿ ನಾನು ಚೀನಾಗೆ ತೆರಳುತ್ತೇನೆ ಎಂದು ಟ್ವಿಟ್ ಮಾಡಿದ್ದಾರೆ.