ಮಂಡ್ಯ, ಮಾ.21, ನ್ಯೂಸ್ ಎಕ್ಸ್ ಪ್ರೆಸ್: ಮೈತ್ರಿ ಸರ್ಕಾರದಿಂದ ಮಂಡ್ಯ ಲೋಕಸಭಾ ಎಲೆಕ್ಷನ್‌ಗೆ ಅಭ್ಯರ್ಥಿಯಾಗಿ ನಿಂತಿರುವ ನಿಖಿಲ್ ಕುಮಾರಸ್ವಾಮಿ ಮನದಾಳದ ಮಾತುಗಳನ್ನಾಡಿದ್ದಾರೆ.
ಸದ್ಯ ಪ್ರಚಾರದಲ್ಲಿ ನಿರತರಾಗಿರುವ ನಿಖಿಲ್ ಕುಮಾರ್, ಪ್ರಚಾರ ತುಂಬಾ ಚೆನ್ನಾಗಿ ನಡೀತಿದೆ. ಜನ ಒಳ್ಳೆಯ ಸ್ವಾಗತ ಕೊಡ್ತಿದ್ದಾರೆ. ತುಂಬಾ ಖುಷಿ ಆಗ್ತಿದೆ. ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ . ಇವತ್ತು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಬೇಕಿತ್ತು. ಆದರೆ ಸಾಧ್ಯವಾಗಲಿಲ್ಲ, ಸೋಮವಾರ ದೊಡ್ಡ ಮಟ್ಟದಲ್ಲಿ ಕಾರ್ಯಕರ್ತರನ್ನು ಸೇರಿಸಿ ನಾಮಪತ್ರ ಹಾಕ್ತೀನಿ ಎಂದಿದ್ದಾರೆ.
ಅಲ್ಲದೇ, ದಿ.ಅಂಬರೀಶ್ ಮತ್ತು ನನ್ನ ನಡುವೆ ಬಾಂಧವ್ಯ ಉತ್ತಮವಾಗಿತ್ತು. ನಾನು ಅಂಬರೀಶ್ ಮನೆ ಮಗನಂತಿದ್ದೆ. ಕುರುಕ್ಷೇತ್ರ ಸಿನಿಮಾ ಟೈಮಲ್ಲಿ ನಾನು ಅವ್ರ ಜೊತೆಗೆ ಆರು ತಿಂಗಳು ಕಳೆದಿದ್ದೆ. ಅಂಬರೀಶ್ ಬದುಕಿದ್ರೆ ನನ್ನ ಪರ ಪ್ರಚಾರಕ್ಕೆ ಬರ್ತಿದ್ರು. ಅಭಿಷೇಕ್- ನಾನು ಉತ್ತಮ ಸ್ನೇಹಿತರು. ಚುನಾವಣೆ ಮುಗಿದ ಮೇಲೆ ಕೈ ಕುಲುಕಿ ಒಂದಾಗ್ತೀವಿ ಎಂದಿದ್ದಾರೆ.