ಬೆಂಗಳೂರು, ಮೇ. 30, ನ್ಯೂಸ್ ಎಕ್ಸ್ ಪ್ರೆಸ್: ನನಗೆ ಸಚಿವ ಸ್ಥಾನ ಸಿಗದೇ ಹಿನ್ನಲೆ ಅಸಮಾಧಾನ ಇದ್ದದ್ದು ನಿಜ. ಸಚಿವರು ಸ್ಥಾನ ಬಿಟ್ಟು ಕೊಡುವ ಬಗ್ಗೆ ಚರ್ಚೆ ಮಾಡ ಬಹುದು. ಸಚಿವ ಸ್ಥಾನ ತ್ಯಾಗ ಮಾಡಲು ಹೇಳಿದರೆ ಅದಕ್ಕೆ ಸಿದ್ಧವಾಗಿರಬೇಕಾಗುತ್ತದೆ. ಹೈಕಮಾಂಡ್ ಆದೇಶಕ್ಕೆ ಯಾವಾಗಲು ಬದ್ಧ ಆಗಿರಬೇಕು ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಬೆಂಗಳೂರಿನ ಪರಮೇಶ್ವರ್ ಅವರ ನಿವಾಸದಲ್ಲಿ ಶಾಸಕರ ಮನವೊಲಿಕೆಗಾಗಿ ಏರ್ಪಡಿಸಲಾಗಿರುವ ಸಭೆಗೆ ಆಗಮಿಸಿ ಮಾತನಾಡಿದ ಅವರು, ನಾನು ಸಚಿವನಾಗಿದ್ದು, ಮೂರು ತಿಂಗಳೋ ಮೂರು ದಿನವೋ. ಸಚಿವ ಆಗಬೇಕಿತ್ತು ಆಗಿದಿದ್ದೇನೆ. ಮುಂದುವರಿಸಿದರೆ ಸಂತೋಷ, ಬಿಟ್ಟು ಕೊಡಿ ಎಂದರೂ ಯಾವುದೇ ರೀತಿಯ ಅಸಮಾಧಾನ ಇಲ್ಲ ಎಂದರು.