ಎದೆ ಹಾಲು ಬ್ಯಾಂಕ್  ಆರಂಭಕ್ಕೆ ವಾಣಿವಿಲಾಸ್ ಸಜ್ಜು

ಎದೆ ಹಾಲು ಬ್ಯಾಂಕ್  ಆರಂಭಕ್ಕೆ ವಾಣಿವಿಲಾಸ್ ಸಜ್ಜು

ಬೆಂಗಳೂರು, ಜು. 30: ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಭಾರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಎದೆ ತಾಯಂದಿರ ಎದೆ ಹಾಲು ಬ್ಯಾಂಕ್ ಕೇಂದ್ರ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಸದ್ದಿಲ್ಲದೆ ಕಾರ್ಯೋನ್ಮುಖವಾಗಲು ಸಜ್ಜುಗೊಳ್ಳುತ್ತಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್ ಹೆಚ್ ಎಮ್) 36.40 ಲಕ್ಷ ಅನುದಾನ  ಬಿಡುಗಡೆ ಮಾಡಿದೆ. ಕರ್ನಾಟಕ ಆಂಟಿ ಬಯೋಟೆಕ್ ಫಾರ್ಮಾಸ್ಯೂಟಿಕಲ್ ಕಂಪನಿ ಈಗಾಗಲೆ ಅಗತ್ಯ ಯಂತ್ರೋಪಕರಣಗಳನ್ನು ಸರಬರಾಜು ಮಾಡಿದೆ. 22 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಆಗಿದ್ದು, ಅಗತ್ಯ ಮೂಲ ಸೌಲಭ್ಯಗಳೊಂದಿಗೆ ಕಾರ್ಯಾರಂಭ ಮಾಡಬೇಕಿದೆ ಎಂದು ವಾಣಿ ವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಅಧೀಕ್ಷಕಿ ಡಾ. ಗೀತಾ ಶಿವಮೂರ್ತಿ ತಿಳಿಸಿದ್ದಾರೆ.

ಕೆಎಪಿಎಲ್ ನಿಂದ ಹಾಲು ಸಂಗ್ರಹ ಬ್ಯಾಂಕ್ ಕಾರ್ಯಾರಂಭಿಸಲು ಪ್ರೀಜರ್, ಬೆಸ್ಟ್ ಪಂಪ್ಸ್,ರೆಫ್ರಿಜಿರೇಟರ್, ಸ್ಕ್ರೀನಿಂಗ್ ಯಂತ್ರ ಸೇರಿ 9 ಉಪಕರಣಗಳನ್ನು ಸ್ಥಾಪಿಸಲಾಗಿದೆ. ತಾಯಂದಿರ ಎದೆಹಾಲಿನ ಗುಣ ಮಟ್ಟ ಮತ್ತು ಪೌಷ್ಟಿಕಾಂಶ ತಿಳಿಯಲು ಮಿಲ್ಕ್ ಅನಲೈಸರ್ ಯಂತ್ರದ ಅಗತ್ಯವಿದ್ದು, ದಾನಿಗಳು ಯಾರಾದರೂ ಮುಂದೆ ಬಂದರೆ ಬೇಗ ಕಾರ್ಯಾರಂಭ ಮಾಡಬಹುದು ಎಂದು ತಿಳಿಸಿದ್ದಾರೆ.

ಈ ಹಾಲಿನ ಬ್ಯಂಕ್ ಸ್ಥಾಪನೆಯಿಂದ ವಾಣಿವಿಲಾಸ,ಇಂಧಿರಾಗಾಂಧಿ ಮಕ್ಕಳ ಆಸ್ಪತ್ರೆ, ಗೌಸಿಯಾ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ನವಜಾತ ಶಿಶುಗಳಿಗೆ ಇದರ ಪ್ರಯೋಜನ ಆಗಲಿದೆ.

ಸಂಗ್ರಹ ಹೇಗೆ

ವಾಣಿವಿಲಾಸ ಆಸ್ಪತ್ರೆಯಲ್ಲಿ ಹೆರಿಗೆ ಆಗುವ ತಾಯಂದಿರಿಂದ ಅವರ ಮಕ್ಕಳಿಗೆ ಸಾಕಾಗುವಷ್ಟು ಹಾಲನ್ನು ಬಿಟ್ಟು ಹೆಚ್ಚುವರಿ ಹಾಲನ್ನು ಸಂಗ್ರಹಿಸಿ ಆಸ್ಪತ್ರೆಯಲ್ಲಿ ಜನಿಸಿ ಹಾಲಿನ ಕೊರತೆ ಎದುರಿಸುವ ನವಜಾತ ಶಿಶುಗಳಿಗೆ ನೀಡಿ, ಹಾಲಿನ ಕೊರತೆ ನೀಗಿಸಬಹುದು ಎಂದು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಸಂಗ್ರಹಿಸುವ ಹಾಲಿನಲ್ಲಿ ಕೊರತೆ ಎದುರಾದರೆ ಆಸ್ಪತ್ರೆಯ ಮಾನದಂಡಗಳಿಗನುಸಾರವಾಗಿ ಹೊರಗಿನಿಂದ ಹಾಲು ದಾನ ಮಾಡಲು ತಾಯಂದಿರು ಮುಂದೆ  ಬಂದರೆ, (ದಾನಿಗಳು) ಅವರಿಗೆ ಅಗತ್ಯ ವೈದ್ಯಕೀಯ ತಪಾಸಣೆ ಮಾಡಿ ಹಾಲು ಸಂಗ್ರಹಿಸಿ ಹಾಲಿನ ಕೊರತೆ ಎದುರಿಸುತ್ತಿರುವ ಮಕ್ಕಳಿಗೆ ಪೂರೈಕೆ ಮಾಡಲಾಗುದು ಎಂದು ತಿಳಿಸಿದ್ದಾರೆ.

ಮೊದಲ ಆದ್ಯತೆ

ಮೊದಲ ಆದ್ಯತೆ ನಮ್ಮ ಆಸ್ಪತ್ರೆಯಲ್ಲಿ ಜನಿಸಿ ಹಾಲಿನ ಕೊರತೆ ಎದುರಿಸುವ ಮಕ್ಕಳಿಗೆ ನೀಡಲಾಗುದು  ಎಂದು ಹೇಳಿದರು. ತಾಯಂದಿರ ಹಾಲು ಪೊರೈಕೆಯಲ್ಲಿ ಗಣನಿಯ ಪ್ರಮಾಣದಲ್ಲಿ ಹೆಚ್ಚಳವಾದರೆ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೂ ಪೂರೈಕೆ ಮಾಡುವುದಾಗಿ ಹೇಳಿದ್ದಾರೆ.

ಕಳೆದ ನಾಲ್ಕು ವರ್ಷಗಳ ಅವಿರತ ಪ್ರಯತ್ನದಿಂದಾಗಿ ಹಾಲಿನ ಬ್ಯಾಂಕ್ ಕಾರ್ಯಾರಂಭ ಮಾಡಲು ಮೂಹೂರ್ತ ಕೂಡಿ ಬಂದಿದ್ದು, ವಾಣಿವಿಲಾಸ್ ಆಸ್ಪತ್ರೆ ಸಜ್ಜುಗೊಂದಿದೆ. ಮಿಲ್ಕ್  ಅನಲೈಸರ್‌ನ್ನು ಯೇರೇದರು ದಾನಿಗಳು ನೀಡಿದರೆ ಆದಷ್ಟು ಬೇಗ ಆರಂಭಿಸ ಬಹುದು, ಸರ್ಕಾರಕ್ಕೂ ಪ್ರಸ್ತಾವನೆ ಕಳಿಸಿದ್ದು, ಆದಷ್ಟು ಬೇಗ ಬಂದರೆ ಶೀಘ್ರವಾಗಿ ಆರಂಭಇಸಲಾಗುದು ಎಂದು. ಡಾ.ಗೀತಾ ಶಿವಮೂರ್ತಿ ಅಧೀಕ್ಷಕಿ ವಾಣಿವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos