ಮುಂಬೈ, ಏ. 5, ನ್ಯೂಸ್ ಎಕ್ಸ್ ಪ್ರೆಸ್: ಇದೀಗ, ಒಂದು ಹಂತಕ್ಕೆ ಮೀಟು ಅಭಿಯಾನ ಸೈಲೆಂಟ್ ಆಗಿದೆ. ಅಷ್ಟರಲ್ಲೇ ಮತ್ತೊಬ್ಬ ನಟಿ ನಿರ್ಮಾಪಕನಿಂದ ತನ್ನ ಮೇಲಾದ ಕಿರುಕುಳ ಪ್ರಯತ್ನವನ್ನ ಬಿಚ್ಚಿಟ್ಟಿದ್ದಾರೆ. ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ಆ ನಟಿಯನ್ನ ಮಂಚಕ್ಕೆ ಕರೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆ ನಿರ್ದೇಶಕನ ನೀಚ ಕೃತ್ಯ ಅರಿಯಲು ಈ ನಟಿಗೆ 8 ವರ್ಷ ಬೇಕಾಯಿತಂತೆ.! ಹೌದು, ಮರಾಠಿ, ಹಿಂದಿ, ತಮಿಳು ಹಾಗೂ ಕನ್ನಡ ಸಿನಿಮಾದಲ್ಲಿ ನಟಿಸಿರುವ ಶ್ರುತಿ ಮರಾಠೆ, ನಿರ್ಮಾಪಕನೊಬ್ಬನ ಕರಾಳ ಮುಖವನ್ನ ಬಹಿರಂಗಪಡಿಸಿದ್ದಾರೆ. ಸಿನಿಮಾದಲ್ಲಿ ನಾಯಕಿಯನ್ನಾಗಿಸುತ್ತೇನೆ, ನನ್ನ ಜೊತೆ ಕಾಂಪ್ರಮೈಸ್ ಆಗು ಎಂದು ಬೇಡಿಕೆಯಿಟ್ಟಿದ್ದನಂತೆ.
16 ವರ್ಷದಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಶ್ರುತಿ ಮರಾಠೆ ಅವರಿಗೆ ನಿರ್ಮಾಪಕನೊಬ್ಬ ಸಿನಿಮಾದಲ್ಲಿ ನಾಯಕಿ ಪಾತ್ರ ನೀಡುತ್ತೇನೆ ಆದ್ರೆ, ನೀನು ನನ್ನ ಜೊತೆ ಕಾಂಪ್ರಮೈಸ್ ಆಗಬೇಕು, ಒಂದು ರಾತ್ರಿ ನನ್ನ ಜೊತೆ ಮಲಗಬೇಕು’ ಎಂದು ಕೇಳಿದ್ದನಂತೆ. ಆದ್ರೆ, ಆ ನಿರ್ಮಾಪಕ ಯಾರು ಎಂದು ಹೆಸರು ಹೇಳಿಲ್ಲ. ಮರಾಠಿ, ಕನ್ನಡ, ತಮಿಳು ಸಿನಿಮಾದಲ್ಲಿ ನಟಿಸಿರುವ ಶ್ರುತಿ ಮರಾಠೆ ಈ ವಿಷ್ಯವನ್ನೀಗ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಆತನಿಗೆ ಚಳಿ ಬಿಡಿಸಿದ್ದ ಶ್ರುತಿ ಆಮಿಷ ತೋರಿದ ಆ ನಿರ್ಮಾಪಕನಿಗೆ ಶ್ರುತಿ ಮರಾಠೆ ಸರಿಯಾಗಿ ತಿರುಗೇಟು ನೀಡಿದ್ರಂತೆ. ”ನಾನು ನಿನ್ನ ಜೊತೆ ಮಲಗಿದರೇ ಹೀರೋಯಿನ್ ಮಾಡ್ತಿಯಾ, ಹಾಗಾದ್ರೆ, ನಿನ್ನ ಜೊತೆ ಮುಲಗುವ ಯಾರನ್ನ ಹೀರೋ…..” ಎಂದು ಪ್ರಶ್ನಿಸಿದ್ದರಂತೆ. ಇದರಿಂದ ಒಂದು ಕ್ಷಣ ಆ ನಿರ್ಮಾಪಕ ಕಂಗಾಲಾದನು ಎಂದು ಶ್ರುತಿ ಹೇಳಿಕೊಂಡಿದ್ದಾರೆ.