ಕೊರ್ಬಾ, ನ. 24 : ಭಾರತೀಯ ಜನತಾ ಪಕ್ಷದ ಛತ್ತೀಸ್ ಗಢ್ ನ ಹಿರಿಯ ನಾಯಕ ಬನ್ಶಿಲಾಲ್ ಮೆಹತೋ ನಿಧನರಾಗಿದ್ದಾರೆ.
ಲಿವರ್ ಸಂಬಂಧಿಸಿದ ಖಾಯಿಲೆಯಿಂದ ಬಳಲುತ್ತಿದ್ದ ಬನ್ಶಿಲಾಲ್ ಮಹತೋ ಅವರಿಗೆ 79 ವರ್ಷ ವಯಸ್ಸಾಗಿತ್ತು.
ಕೊರ್ಬಾ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಬನ್ಶಿಲಾಲ್ ಮಹತೋ ಅವರ ನಿಧನಕ್ಕೆ ಮುಖ್ಯಮಂತ್ರಿ ಭೂಪೇಶ್ ಬಾಘೆಲ್, ರಾಜ್ಯಪಾಲ ಅನುಸೂಯ ಸೇರಿದಂತೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.