ಬೆಂಗಳೂರು, ಅ, 15: ಉಪಚುನಾವಣೆ ಹಿನ್ನೆಲೆಯಲ್ಲಿ ವೀಕ್ಷಕರ ಸಭೆಯನ್ನು ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೆ.ಸಿ ವೇಣುಗೋಪಾಲ್ ರವರ ನೇತೃತ್ವದಲ್ಲಿ ಕರೆಯಲಾಗಿತ್ತು.
ಈ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯ ಅವರು, ಕೆಪಿಸಿಸಿ ಅಧ್ಯಕ್ಷರಾದ ಶ್ರೀ ದಿನೇಶ್ ಗುಂಡೂರಾವ್ ಅವರು, ಕೆಪಿಸಿಸಿ ಕಾರ್ಯಧ್ಯಕ್ಷರಾದ ಶ್ರೀ ಈಶ್ವರ್ ಖಂಡ್ರೆ ಅವರು, ಮಾಜಿ ಕೇಂದ್ರ ಸಚಿವರಾದ ಶ್ರೀ ವೀರಪ್ಪ ಮಾಯ್ಲಿರವರು, ಮಾಜಿ ಸಚಿವ ಕೃಷ್ಣಭೈರೇಗೌಡ ಅವರು, ಶ್ರೀ ಶಿವಶಂಕರ್ ರೆಡ್ಡಿ ಅವರು, ಶ್ರೀ ವಿ ಮುನಿಯಪ್ಪ ಅವರು, ಎಐಸಿಸಿ ಕಾರ್ಯದರ್ಶಿ ಶ್ರೀ ಪಿ.ಸಿ ವಿಷ್ಣುನಾಥ್ ಅವರು, ಮಾಜಿ ಶಾಸಕ ಶ್ರೀ ಎನ್ ಸಂಪಂಗಿ ಅವರು, ಉಪಸ್ಥಿತರಿದ್ದರು.