ಪೀಣ್ಯ –ದಾಸರಹಳ್ಳಿ, ಆ. 17: ಶೆಟ್ಟಿಹಳ್ಳಿಯಲ್ಲಿ ಮೌನಂ ಚಿತ್ರನಿರ್ಮಾಪಕ ಶ್ರೀ ಹರಿ ರೆಡ್ಡಿ ನೇತೃತ್ವದಲ್ಲಿ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ದಿನಬಳಕೆ ವಸ್ತುಗಳನ್ನು ಸಂಗ್ರಹಿಸಿದರು. ಎಲ್ಲಾ ವಸ್ತುಗಳನ್ನು ಉತ್ತರ ಭಾಗಕ್ಕೆ ಕಳುಹಿಸಿ ಕೊಡಲು ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್ ಮುನಿರಾಜು ಚಾಲನೆ ನೀಡಿದರು. ಈ ವೇಳೆ ಬಿಜೆಪಿ ಮುಖಂಡರಾದ ಕೆ.ಸಿ. ಶ್ರೀನಿವಾಸ್, ಸೋಮಶೇಖರ್, ಚಂದ್ರಶೇಖರ್, ಸುಜಾತ ಎಸ್ ಮುನಿರಾಜು ಇದ್ದರು.