ಮತ್ತೆ ಸಿಎಸ್ ಕೆ ಪರ ಆಡುವೆ : ರಾಯುಡು

ಮತ್ತೆ ಸಿಎಸ್ ಕೆ ಪರ ಆಡುವೆ : ರಾಯುಡು

ನವದೆಹಲಿ, ಆ. 25 : ಮುಂದಿನ ಸೀಸನ್ ನ ಐಪಿಎಲ್ ನಲ್ಲಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಪರ ಅಡುವುದಾಗಿ ಅಂಬಾಟಿ ರಾಯುಡು ನೀಡಿದ್ದಾರೆ.
ಬೇಸರದಿಂದ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ದೂರ ಸರಿದಿದ್ದ ರಾಯುಡು ತನ್ನ ನಿರ್ಧಾರದಿಂದ ಯೂ ಟರ್ನ್ ಹೊಡೆದಿದ್ದಾರೆ. 33ರ ಹರೆಯದ ಹೈದರಾಬಾದ್ ಮೂಲದ ಆಟಗಾರ, ಕಳೆದ ತಿಂಗಳು ಎಲ್ಲಾ ಮಾದರಿಯ ಕ್ರಿಕೆಟಗೆ ವಿದಾಯ ಹೇಳಿದ್ದರು. ವಿಶ್ವಕಪ್ ತಂಡಕ್ಕೆ ತನ್ನನ್ನು ಪರಿಗಣಿಸದೇ ಇರುವುದಕ್ಕೆ ಬೇಸರಗೊಂಡಿದ್ದ ಅವರು ನಂತರ ಶಿಖರ್ ಧವನ್ ಗಾಯದಿಂದ ಹೊರಬಿದ್ದಾಗ ಅವರ ಬದಲು ರಿಷಭ್ ಪಂತ್ ರನ್ನು ಆಯ್ಕೆ ಮಾಡಿದಾಗ ನಿವೃತ್ತಿ ನಿರ್ಧಾರ ಮಾಡಿದ್ದರು. ಆದರೆ ಬಿಸಿಸಿಐ ನಿರ್ಧಾರದಿಂದ ತಾನು ಕೋಪಗೊಂಡಿರಲಿಲ್ಲ. ಆದರೆ ವಿಶ್ವಕಪ್ ಗೆ ಆಯ್ಕೆ ಆಗದೇ ಇರುವುದಕ್ಕೆ ಬೇಸರವಾಗಿದೆ ಎಂದು ರಾಯುಡು ಹೇಳಿಕೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos