ಮಾಸ್ಕ್ ದಿನ: ಕೋವಿಡ್ 19 ವಿರುದ್ಧ ಜಾಗೃತಿ

  • In State
  • June 19, 2020
  • 365 Views
ಮಾಸ್ಕ್ ದಿನ: ಕೋವಿಡ್ 19 ವಿರುದ್ಧ ಜಾಗೃತಿ

ಹಾನಗಲ್: ತಾಲೂಕು ಆಡಳಿತ ಮತ್ತು ಎಲ್ಲಾ ಇಲಾಖೆಗಳ ಸಹಭಾಗಿತ್ವದಲ್ಲಿ ಮಾಸ್ಕ್ ದಿನ ಆಚರಿಸಲಾಯಿತು ಹಾಗೂ ಕೋವಿಡ್ 19 ವಿರುದ್ಧ ಜನಜಾಗೃತಿ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಸಂಸದ ಶಿವಕುಮಾರ್ ಉದಾಸಿ, ಕೋವಿಡ್ 19 ಸೋಂಕು ನಿಯಂತ್ರಣಕ್ಕೆ ಮಾಸ್ಕ್, ಸಾಮಾಜಿಕ ಅಂತರ, ನೈರ್ಮಲ್ಯ ಪಾಲನೆ ಅನಿವಾರ್ಯ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು  ಮಾಸ್ಕ್ ದಿನ ಆಚರಿಸುತ್ತಿದ್ದು, ಮಾಸ್ಕ್ ಧರಿಸಿ ಮಹಾಮಾರಿ ತೊಲಗಿಸಿ. ಕೊರೋನಾ ಹಿಮ್ಮೆಟಿಸಲು ಮಾರ್ಗಸೂಚಿಗಳನ್ನು ಪಾಲಿಸೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ರಾಜು ಗೌಳಿ. ಕಲ್ಯಾಣ್ ಕುಮಾರ್ ಶೆಟ್ಟರ್. ಪದ್ಮನಾಮ ಕುಂದಾಪುರ. ಅಕ್ಕಿವಳ್ಳಿ ವಕೀಲರು. ಸಂತೋಷ್ ಟೀಕೋಜಿ. ಶಿವಲಿಂಗಪ್ಪ ತಲ್ಲೂರು.  ಹಾನಗಲ್ ತಶೀಲ್ದಾರ್ ಪಿ.ಎಸ್. ಎರಿಸ್ವಾಮಿ. ಹಾಗೂ ಸಿಪಿಐ ಶಿವಶಂಕರ್ ಆರ್ ಗಣಾಚಾರಿ. ಪಿಎಸ್ಐ ಶ್ರೀಶೈಲ್ ಪಟ್ಟಣಶೆಟ್ಟಿ. ಮುಂತಾದ ಮುಖಂಡರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos