ಮ್ಯಾನ್‌ ಹೋಲ್ ಗಳಿಗಿಲ್ಲ ಮುಕ್ತಿ!

ಮ್ಯಾನ್‌ ಹೋಲ್ ಗಳಿಗಿಲ್ಲ ಮುಕ್ತಿ!

ರಾಜಾಜಿನಗರ, ಆ. 29: ಅತ್ಯಂತ ಚಿರ ಪರಿಚಿತ ರಸ್ತೆಯೆಂದರೆ ರಾಜಾಜಿನಗರದ ವರನಟ ದಿವಂಗತ ಡಾ.ರಾಜ್‌ ಕುಮಾರ್ ಹಳ್ಳಿ ಜನರ ಬಾಯಲ್ಲೂಸುಳಿದಾಡೋ ರಸ್ತೆ ಎಥಲೇ ಕರೆಯುತ್ತಾರೆ.ಅಷ್ಟೇನು ಅನೈರ್ಮಲ್ಯ ಕಾಡದ ರಸ್ತೆಗಳು ಮತ್ತು ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದೆ.

ಸಂಪೂರ್ಣ ಕಸದ ಸಮಸ್ಯೆ ನಿವಾರಣೆ ಮಾಡಲಾಗಿಲ್ಲ. ರಾತ್ರಿಯಿಡಿ ವಾಹನಗಳ ಸಂಚಾರ ಇದ್ದೇ ಇರುತ್ತದೆ. ಹೊಸದುರ್ಗ, ಬಳ್ಳಾರಿ, ಹಾಸನ, ಶಿವಮೊಗ್ಗ, ತುಮಕೂರು, ಸೇರಿದಂತೆ ಹತ್ತು ಹಲವು ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ. ರಾತ್ರಿ ವೇಳೆ ರಸ್ತೆ ಅಗಿಯೋ ಕೆಲಸದಿಂದಾಗಿ ಇಲ್ಲಿನ ನಿವಾಸಿಗಳಿಗೆ ಕೊಂಚ ನಿದ್ದೆಗೆಡಿಸಿದೆ.

ಮ್ಯಾನ್‌ ಹೋಲ್ ಸಮಸ್ಯೆ

ನಗರದ ಬಹುತೇಕ ಬಡವಣೆಗಳಲ್ಲಿ ನಿವಾಸಿಗರು, ಅಂಗಡಿ ಮಾಲಿಕರು, ಹೋಟೆಲ್, ಸಣ್ಣಪುಟ್ಟ ವ್ಯಾಪಾರಿಗಳಿಗೆ ತಲೆಯಾಗಿ ಕಾಡುತ್ತಿವೆ ಮ್ಯಾನ್ ಮುಚ್ಚದೆ ಕೊಳಚೆ ನೀರು ರಸ್ತೆಯಲ್ಲೆಲ್ಲ ಹರಿಯುತ್ತಿರುವುದರಿಂದ ಪಾದಾಚಾರಿಗಳಿಗಂತು ನರಕಯಾತನೆ ಅನುಭವಿಸುವಂತಾಗಿದೆ ಎಂದು ಬಾಬುಜಗಜೀವನ್ ರಾಂ ಚರ್ಮ ಕುಟೀರದ ಮಾಲೀಕ ಅಂಜನಪ್ಪ, ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಾನಿಲ್ಲಿ ಕೂತು ಚಪ್ಪಲಿ ಹೊಲೆಯಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಜಿನಗರದ ಮೊದಲ ಕ್ರಾಸ್ ನಿಂದ ಎಂಕೆಕೆ ರಸ್ತೆಗೆ ಕಳೆದ ಮೂರು ದಿನಗಳಿಂದ ಮ್ಯಾನ್ ಹೋಲ್ ತುಂಬಿ ನೀರು ಹರಿದು ಬರುತ್ತಿದೆ. ಪಕ್ಕದ್ದೇ ಮಲ್ಲೆಶ್ವರಂ ಮತ್ತು ಶಿವಜಿನಗರ ಮುಂತದ ಕಡೆ ಪ್ರಯಾಣಿಕರೆ ಸಂಚರಿಸಲು ಇಲ್ಲೆ ಬಂದು ಬಸ್ ಹತ್ತಬೇಕಿದೆ. ಶಲಾ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪ್ರತಿನಿತ್ಯ ಸಾವಿರಾರು ಜನರು ಮತ್ತು ವಾವನಗಳು ಒಡಾಡುವ ರಸ್ತೆಗೆ ನೀರು ಹರಿಯುತ್ತಿದೆ. ಈಗಾಗಲೇ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಲಾಗಿದೆ. ಆದರೂ ಅಧಿಕಾರಿಗಳು ಇಲ್ಲಿಗೆ ಸುಳಿದಿಲ್ಲ ಎಂದು ಮೊಬೈಲ್ ಅಂಗಡಿ ಮಲೀಕ ಕಿರಣ್ ಕುಮಾರ್ ಅರೋಪಿಸಿದರು.

ವೆಗವಾಗಿ ಬರುವ ಕರುಗಳು ಮತ್ತು ದ್ವಿಚಕ್ರ ವಾಹನಗಳ ಸವಾರರು ಕೊಳಚೆ ನೀರಿನ ಮೆಲೆ ವಾಹನ ಚಲಾಯಿಸುವುದರಿಂದ ರಸ್ತೆ ಬದಿ ಓಡಾಡುವ ಪದಾಚಾರಿಗಳಿಗೆ ಕೊಳಚೆ ನಿರಿನ ಸಿಡಿಯುತ್ತದೆ. ಹಲವು ಜನರಿಗೆ ನೀರು ಸಿಡಿದು ಮತ್ತೆ ಮನೆಗೆ ಹೋಗಿ ಸ್ನಾನ ಮಾಡಿ ಕಛೇರಿ ಖಾಸಗಿ ಕೆಲಸಗಳಿಗೆ ಹೋಗುವ ಸಾರ್ವಜನಿಕರ ಗೋಳು ಹೇಳತೀರದಾಗಿದೆ ಎಂದು ಪ್ರಯಾಣಿಕರಾದ ಮಂಜುಶ್ರೀ ಹೇಳಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos