ಕೋಲ್ಕತ್ತಾ (ಪಶ್ಚಿಮ ಬಂಗಾಲ): ಸಿಬಿಐ ಅಧಿಕಾರಿಗಳ ನಡೆಗೆ ವಿರುದ್ಧವಾಗಿ ಪಶ್ಚಿಮ ಬಂಗಾಲದ ಮುಖ್ಯಮಂತ್ರಿಗೆ
ಮಮತಾ ಬ್ಯಾನರ್ಜಿ ತೆಗೆದುಕೊಂಡ ತೀರ್ಮಾನಕ್ಕೆ ವಿರೋಧ ಪಕ್ಷಗಳು ಬೆಂಬಲವಾಗಿ ನಿಂತಿವೆ. ಆದರೆ ಸಿಪಿಎಂ ಈ ವಿಷಯದಲ್ಲಿ ಭಿನ್ನ ನಿಲುವು ಹೊಂದಿದೆ.
ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸದ್ಯದ ಸನ್ನಿವೇಶಕ್ಕೆ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತೃಣಮೂಲ ಕಾಂಗ್ರೆಸ್ ನ ಚಿಟ್ ಫಂಡ್ ಹಗರಣ ಬಯಲಾಗಿ ವರ್ಷಗಳೇ ಕಳೆದಿವೆ. ಆ ಹಗರಣದಲ್ಲಿನ ಪ್ರಮುಖ ಮಾಸ್ಟರ್ ಮೈಂಡ್ ಬಿಜೆಪಿ ಸೇರಿದ್ದರಿಂದ ಮೋದಿ ಸರಕಾರ ಮೌನ ವಹಿಸಿಬಿಟ್ಟಿತು ಎಂದಿದ್ದಾರೆ.
ಕೋಲ್ಕತ್ತಾದಲ್ಲಿ ಬಿಜೆಪಿ ಹಾಗೂ ಟಿಎಂಸಿಯ ಈ ನಾಟಕವು ಯಾವುದೇ ಸಿದ್ಧಾಂತ ಉಳಿಸಲು ನಡೆಸುತ್ತಿರುವ ಹೋರಾಟವಲ್ಲ. ತಮ್ಮ ಪಕ್ಷದಲ್ಲಿನ ಭಷ್ಟರು ಹಾಗೂ ಭ್ರಷ್ಟಾಚಾರವನ್ನು ಮುಚ್ಚಿಡುವ ಪ್ರಯತ್ನ. ಈ ಪ್ರಜಾಪ್ರಭುತ್ವವಲ್ಲದ, ಭ್ರಷ್ಟ, ಕೋಮುವಾದಿ ಹಾಗೂ ಸರ್ವಾಧಿಕಾರಿ ಧೋರಣೆಯ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಸಿಪಿಎಂ ಹೋರಾಡುತ್ತಿದೆ ಹಾಗೂ ಇದನ್ನು ಮುಂದುವರಿಸುತ್ತದೆ ಎಂದಿದ್ದಾರೆ.