ನೇಪಾಳದಲ್ಲಿ ಮಳೆ ಬಿರುಗಾಳಿ; 25 ಸಾವು

ನೇಪಾಳದಲ್ಲಿ ಮಳೆ ಬಿರುಗಾಳಿ; 25 ಸಾವು

ಕಠ್ಮಂಡು, . 2, ನ್ಯೂಸ್ ಎಕ್ಸ್ ಪ್ರೆಸ್: ದಕ್ಷಿಣ ನೇಪಾಳದ ಹಲವಾರು ಗ್ರಾಮಗಳಿಗೆ ಮಳೆ ಬಿರುಗಾಳಿ ಬೀಸಿದ್ದು ಕನಿಷ್ಠ 25 ಜನರು ಮೃತಪಟ್ಟಿದ್ದಾರೆ ಹಾಗೂ 400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾರ ಮತ್ತು ಪಾರ್ಸ ಜಿಲ್ಲೆಗಳ ಹಲವು ಗ್ರಾಮಗಳಿಗೆ ರವಿವಾರ ಸಂಜೆ ಬಿರುಗಾಳಿ ಬೀಸಿತು ಎಂದು ನೇಪಾಳ ಗೃಹ ಸಚಿವಲಯದ ಅಧಿಕಾರಿಗಳು ಹೇಳಿದರು.

ಕಠ್ಮಂಡುವಿನಿಂದ ದಕ್ಷಿಣಕ್ಕೆ 128 ಕಿ.ಮೀ. ದೂರದಲ್ಲಿರುವ ಬಾರ ಜಿಲ್ಲೆಯಲ್ಲಿ 24 ಜನರು ಮೃತಪಟ್ಟರೆ, ಪಾರ್ಸ ಜಿಲ್ಲೆಯಲ್ಲಿ ಓರ್ವ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ.

ಗಾಯಗೊಂಡವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಷ್ಟ್ರೀಯ ತುರ್ತು ಕಾರ್ಯಾಚರಣೆ ಕೇಂದ್ರ ಹೇಳಿದೆ.

ಫ್ರೆಶ್ ನ್ಯೂಸ್

Latest Posts

Featured Videos