ಬೆಂಗಳೂರು, ಜೂ. 18: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ಮಹಿಳೆ ಒಬ್ಬರು ತನಗೆ ನ್ಯಾಯ ಸಿಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮದ್ಯರಾತ್ರಿ ಪೊಲೀಸ್ ಠಾಣೆ ಮುಂದೆ ಹೈಡ್ರಾಮ, ಪೊಲೀಸರ ಕ್ರಮ ಖಂಡಿಸಿ ಮದ್ಯರಾತ್ರಿ ಕುಟುಂಬಸ್ಥರಿಂದ ಪೊಲೀಸ್ ಠಾಣೆ ಮುತ್ತಿಗೆ. ಪೊಲೀಸರ ನಿರ್ಲಕ್ಷ್ಯದಿಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಅಂತ ಆಕ್ರೋಶ. ತಡರಾತ್ರಿ ಪೊಲೀಸ್ ಠಾಣೆ ಮುಂದೆ ಮುಗಿಲು ಮಟ್ಟಿದ ಕುಟುಂಬಸ್ಥರ ಆಕ್ರಂಧನ.
ದೇವನಹಳ್ಳಿ ಪಿಎಸ್ಐ ಗಂಗರುದ್ರಯ್ಯ ಮತ್ತು ಪೇದೆಗಳ ಮುಂದೆ ಆರೋಪಿಗಳ ಮುಂದೆ ಹಲ್ಲೆ ಮಾಡಿದರು ಕ್ರಮ ಕೈಗೊಂಡಿಲ್ಲ ಅಂತ ಆಕ್ರೋಶ. ಕೂಡಲೆ ಆರೋಪಿಗಳನ್ನ ಬಂದಿಸುವಂತೆ ಒತ್ತಾಯ.
ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ರೆ ಮಹಿಳೆ ಸಾಯುತ್ತಿರಲಿಲ್ಲ ಅಂತ ಆಕ್ರೋಶ. ಆಕ್ರೋಶ ಭರಿತ ಮೃತಳ ಕುಟುಂಬಸ್ಥರ ಮನವೊಲಿಸಲು ಪೊಲೀಸರ ಹರಸಾಹಸ.