ಮ್ಯಾಗಿ ಮಾಡಲು ಹೋಗಿ ಮಗು ಸಾವು

ಮ್ಯಾಗಿ ಮಾಡಲು ಹೋಗಿ ಮಗು ಸಾವು

ತುಮಕೂರು,ಅ. 14 : ಮ್ಯಾಗಿ ಮಾಡಲು ಹೋಗಿ 7 ವರ್ಷದ ಬಾಲಕ ಪ್ರಾಣ ಕಳೆದುಕೊಂಡ ದುರ್ಘಟನೆ ನಗರದ ಕ್ರಿಶ್ಚಿಯನ್ ಸ್ಟ್ರೀಟ್ನಲ್ಲಿ ನಡೆದಿದೆ.
ನೋಯಲ್ ಪ್ರಸಾದ್ (7) ಮೃತ ಬಾಲಕ. ಪಾಲಕರ ಬಳಿ ತೆರಳಿ ನಾನು ಮ್ಯಾಗಿ ಮಾಡುತ್ತೇನೆ ಎಂದು ಅಡುಗೆಮನೆಗೆ ಹೋಗಿ ಗ್ಯಾಸ್ ಸ್ಟೌ ಆನ್ ಮಾಡಿದ್ದಾನೆ. ಲೈಟರ್ನಲ್ಲಿ ಬೆಂಕಿ ಹಚ್ಚಲು ತಡ ಮಾಡಿದ ಹಿನ್ನೆಲೆ ಬೆಂಕಿ ಹೊತ್ತುಕೊಂಡು ಬಾಲಕ ತೀವ್ರವಾಗಿ ಗಾಯಗೊಂಡಿದ್ದ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ತುಮಕೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos