ಬೆಂಗಳೂರು, ಮಾ.15, ನ್ಯೂಸ್ ಎಕ್ಸ್ ಪ್ರೆಸ್: ನಡೆಯಲಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮದ್ಯ ಮಾರಾಟಕ್ಕೆ ಕೆಲವು ಹೊಸ ನಿಯಮಗಳನ್ನು ವಿಧಿಸಿದೆ.
ಚುನಾವಣಾ ವೇಳೆ ಮದ್ಯ ಕೊಟ್ಟೇ ವೋಟು ಹಾಕಿಸಿಕೊಳ್ಳುವ ಜನಪ್ರತಿನಿಧಿಗಳಿಗೆ ಕಡಿವಾಣ ಹಾಕಲು ಚುನಾವಣಾ ಆಯೋಗ ಬಾರ್ ಮಾಲೀಕರಿಗೆ ಈ ಬಾರಿಯ ಲೋಕಸಭಾ ಚುನಾವಣೆಗೆ ಹೊಸ ರೀತಿಯ ನಿಯಮಗಳನ್ನು ವಿಧಿಸಿದೆ.
ಬಾರನ್ನು ಬೆಳಗ್ಗೆ 10.30ಕ್ಕೆ ತೆರೆಯಬೇಕು. ರಾತ್ರಿ ನಿಗಧಿತ ಅವಧಿಗೆ ಮುಚ್ಚಬೇಕು. ಬೇಗ ತೆರೆಯೋದು, ಲೇಟಾಗಿ ಮುಚ್ಚೋದು ಮಾಡಿದರೆ ಅಂತಹ ಬಾರ್ ಗಳ ಮೇಲೆ ದಂಡ ವಿದೀಸಲಾಗುವು.
ಒಬ್ಬ ವ್ಯಕ್ತಿ 2.3 ಲೀಟರ್ ನಷ್ಟು ಮದ್ಯ ಖರೀದಿ ಮಾಡಬಹುದು, 2.3 ಲೀಟರ್ ಗಿಕಿಂತ ಹೆಚ್ಚು ಖರೀದಿಸಿದರೆ ಬಾರ್ಗಳ ಲೈಸೆನ್ಸ್ ಗೆ ಕುತ್ತು.
ನಿತ್ಯ ಬೆಳಗ್ಗೆ 8 ಗಂಟೆಯೊಳಗೆ ಮದ್ಯ ಮಾರಾಟ, ವ್ಯಾಪಾರದ ಸಂಪೂರ್ಣ ವಿವರ ನೀಡಬೇಕು. ದಿನದ ವ್ಯಾಪಾರದ ದಾಖಲೆಯನ್ನು ಅಬಕಾರಿಗೆ ಕಳಿಸಬೇಕು.