ದೊಡ್ಡಬಳ್ಳಾಪುರ, ಅ. 15: ಪೊಲೀಸ್ ಸ್ಟೇಷನ್ ಅಂದಾಕ್ಷಣ ಎದೆ ಒಂದು ಕ್ಷಣ ಢವ ಢವ ಎನ್ನುತ್ತದೆ. ಅಲ್ಲಿ ಮರ್ಡರ್ ಆಯ್ತು. ಎಲ್ಲಿ ಗಲಾಟೆ ಆಯ್ತು ಅಂತಾ ಯಾವಾಗಲೂ ಆರಕ್ಷಕ ಪಡೆ ಫುಲ್ ಟೆನ್ಷನ್ ತಲೆಬಿಸಿ ಕೆಲಸದ ಒತ್ತಡದಲ್ಲಿ ಹಬ್ಬ ಹರಿದಿನಗಳನ್ನ ಜೊತೆಗೆ ಕುಟುಂಬದ ಜೊತೆಗಿನ ವೈಯಕ್ತಿಕ ಬದುಕನ್ನೇ ಮರೆತಿರುತ್ತಾರೆ. ಆದರೆ ಇದನ್ನ ನೀಗಿಸುವಂತ ದಸರಾ ಸಂಭ್ರಮ ಇಂದು ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಹೀಗೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿರೋ ಪೊಲೀಸ್ ಠಾಣೆ. ಠಾಣೆಯ ಮುಂಭಾಗ ದಸರಾ ವೈಭವ ನೆನಪಿಸೋ ಆನೆಗಳ ದರ್ಬಾರ್. ಸಾಂಪ್ರಾದಯಿಕ ಹುಡಗೆಗಳನ್ನ ತೊಟ್ಟು ನಿಂತಿರೋ ನಮ್ಮ ಆರಕ್ಷಕರು. ಠಾಣೆಯಲ್ಲಿ ಹೋಮ ಅವನಾ. ಇಂತಹ ದಸರಾ ಸಂಭ್ರಮ ಕಂಡು ಬಂದಿದ್ದು, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ. ಇಂದು ನಗರ ಪೊಲೀಸ್ ಠಾಣೆಯಲ್ಲಿ ದಸರಾ ಪೂಜೆಯನ್ನ ಅದ್ದೂರಿಯಾಗಿ ಏರ್ಪಡಿಸಲಾಗಿತ್ತು. ಮುಖ್ಯವಾಗಿ ಸದಾ ಕ್ರಿಮಿನಲ್ ಕೇಸ್ ಪತ್ತೆ, ಅಪಘಾತ, ಭದ್ರತಾ ಕೆಲಸ, ಕೊಲೆ, ಸುಲಿಗೆ, ಗಲಾಟೆ ಹೀಗೆ ಒತ್ತಡದ ಕೆಲಸದಲ್ಲಿ ಬ್ಯೂಸಿಯಾಗಿರುವ ಪೊಲೀಸರು ಹಬ್ಬ-ಹರಿದಿನಗಳನ್ನ ಮರೆತೆ ಹೋಗಿರುತ್ತಾರೆ.
ಇದನ್ನ ಅರಿತ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೆ. ವೆಂಕಟೇಶ್ ಅವರು, ಸಿಬ್ಬಂದಿಗೆಲ್ಲಾ ಹಬ್ಬದ ಸಂಭ್ರಮವನ್ನು ಮೂಡಿಸುವ ಸಲುವಾಗಿ ಇಡೀ ಸ್ಟೇಷನ್ ಅನ್ನೇ ಸಂಭ್ರಮದ ಮನೆಯನ್ನಾಗಿ ಮಾರ್ಪಡಿಸಿದ್ರು.
ಸಬ್ ಇನ್ಸ್ಪೆಕ್ಟರ್ರ ಕೆಲಸಕ್ಕೆ ಇಡೀ ಸಿಬ್ಬಂದಿ ಮೆಚ್ಚುಗೆ ಸೂಚಿಸಿ ವೈಟ್ ಅಂಡ್ ವೈಟ್ ಪಂಚೆ ಶರ್ಟ್ ನಲ್ಲಿ ಮಿಂಚಿದ್ರು. ಇನ್ನೂ ಲೇಡಿ ಪೊಲೀಸರು ಕೂಡ ಮಿರಿ ಮಿರಿ ಮಿಂಚುವ ಸೀರೆಯುಟ್ಟು ಮಿಂಚಿದ್ರು. ಇದನ್ನ ಕಂಡು ಠಾಣೆಗ ಬಂದಿದ್ದ ಸಾರ್ವಜನೀಕರು ಠಾಣೆಯಲ್ಲಿ ದಸರಾ ವೈಭವವನ್ನ ನೋಡಿ ಖುಷಿಪಟ್ರು.
ಇನ್ನೂ ಯಾವಾಗಲೂ ಠಾಣೆಯಲ್ಲಿ ವಿವಿಧ ಅಪರಾಧಗಳಲ್ಲಿ ತೋಡಗಿರೋ ಹಲವಾರು ಕಳ್ಳಕಾಕರೇ ಬಂದು ಹೋಗಿರ್ತಾರೆ.ಅಲ್ಲದೆ ಠಾಣೆ ಅಂದ್ರೆ ಇಲ್ಲಿ ಆ ಗಲಾಟೆ
ಮಾಡಿದವರು ಈ ಗಲಾಟೆ ಮಾಡಿದವರ ಸಮಸ್ಯೆಗಳ ಕೇಳೊ ಕೇಂದ್ರವಾಗಿರುತ್ತೆ. ಹೀಗಾಗಿ ಠಾಣೆಯಲ್ಲಿಯೂ ಶಾಂತಿ ನೆಲಸಲಿ. ಯಾವುದೇ ಗಲಾಟೆಗಳು ಕೊಲೆ ಪ್ರಕರಣಗಳು, ಕಳ್ಳತನವಾಗದೇ ಇರಲಿ ಅಂತಾ ಠಾಣೆಯಲ್ಲಿ ಶಾಂತಿ ಹೋಮವವನ್ನ ಮಾಡಿಸಲಾಯ್ತು. ಅಲ್ಲದೆ ದುರ್ಗಾದೇವಿಯನ್ನ ಸ್ಮರಣೆ ಮಾಡಿದ ಸಬ್ಇನ್ಸ್ಪೆಕ್ಟರ್ ಸ್ವತಃ ತಾವೇ ಭಕ್ತಿಗಿ
ತೆಯನ್ನ ಹಾಡಿ ದೇವರನ್ನ ನೆನೆದರು. ಇನ್ನೂ ಸಾಂಪ್ರದಾಯಿಕ ಉಡುಗೆಗಳನ್ನ ತೊಟ್ಟಿದ್ದ ಪೊಲೀಸರು ತನ್ನ ದಿನನಿತ್ಯದ ಖಾಕಿಯಿಂದ ದೂರಹುಳಿದು ಠಾಣೆಯ ಮುಂದೆ ಸೆಲ್ಪಿ ತೆಗೆದುಕೊಂಸು ಸಖತ್ ಎಂಜಾಯ್ ಮಾಡಿದ್ರು.
ಇದೆಲ್ಲಾ ದಸರಾ ಸಂಭ್ರಮದ ಕುರಿತು ಮಾತನಾಡಿದ ಸಬ್ ಇನ್ಸ್ಪೆಕ್ಟರ್ ಕೆ. ವೆಂಕಟೇಶ್ ನಮ್ಮ ಪೊಲೀಸ್ ಇಲಾಖೆ ಸಿಬ್ಬಂದಿ ಸದಾ ಒತ್ತಡದಲ್ಲೇ ಕೆಲಸ ಮಾಡುತ್ತಾರೆ. ಹಗಲು-ರಾತ್ರಿ ಎನ್ನದೆ ಫ್ಯಾಮಿಲಿ ಬಿಟ್ಟು ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಹೀಗಾಗಿ ಅವರನ್ನು ಒತ್ತಡದಿಂದ ಹೊರತಂದು ಒಮ್ಮೆ ರಿಲೀಫ್ ಮಾಡುವಂತ ಕೆಲಸ ಮಾಡಲು ಈ ರೀತಿಯಾಗಿ ಪೊಲೀಸ್ ಸ್ಟೇಷನ್ ನಲ್ಲೇ ಹಬ್ಬದ ಸಂಭ್ರಮವನ್ನು ಮಾಡಲಾಯಿತು ಅಂತಾ ತಮ್ಮ ಖುಷಿಯನ್ನ ಹಂಚಿಕೊಂಡರು.
ಒಟ್ನಲ್ಲಿ ತಮ್ಮ ವೈಯಕ್ತಿಕ ಜೀವನ್ನಕ್ಕೂ ಸಮಯ ಮೀಸಲಿಡಲಾಗದೆ ಸದಾ ಸಾರ್ವಜನಿಕರ ಕ್ಷೇಮಕ್ಕಾಗಿ ಕೆಲಸ ಮಾಡುತ್ತಿರುವ ಪೊಲೀಸರು ಇಂದು ದಸರಾ ಹಬ್ಬವನ್ನ ಠಾಣೆಯಲ್ಲೆ ಅದ್ದೂರಿಯಾಗಿ ಆಚರಿಸಿ ಎಂಜಾಯ್ ಮಾಡಿದ್ರು.