ಚಂದ್ರಗ್ರಹಣ: ಆಕಾಶದಲ್ಲಿ ವಿಸ್ಮಯ ಕಂಡ ಜನತೆ

ಚಂದ್ರಗ್ರಹಣ: ಆಕಾಶದಲ್ಲಿ ವಿಸ್ಮಯ ಕಂಡ ಜನತೆ

2025ನೇ ಸಾಲಿನ ಎರಡನೇ ಚಂದ್ರ ಗ್ರಹಣ ಹಾಗೂ ಕೊನೆಯ ಚಂದ್ರಗ್ರಹಣ ನಿನ್ನೆ (ಭಾನುವಾರ ಸೆಪ್ಟೆಂಬರ್ 07) ರಾತ್ರಿ ಸುಮಾರು 9: 58ರ ಹೊತ್ತಿಗೆ ಆಗಸದಲ್ಲಿ ಬೆಳ್ಳಿ ತಟ್ಟಿಯಂತೆ ಹೊಳೆಯುತ್ತಿದ್ದ ಚಂದಿರ ಬೆಂಕಿಯ ಚಂಡಿನಂತೆ ನಿಗನಿಗೆ ಹೊಳೆಯುತ್ತಿದ್ದ.

ಹೌದು, ಆಕಾಶದಲ್ಲಿ ಅಪರೂಪದ ದೃಶ್ಯವನ್ನು ನೋಡಿ ಜನರು ವಿಸ್ಮಯಗೊಂಡಿದ್ದಾರೆ. ಸುದೀರ್ಘ 3 ಗಂಟೆಗೂ ಹೆಚ್ಚು ಕಾಲ ರಾಹುಗ್ರಸ್ಥ ಚಂದ್ರ ಗ್ರಹಣ ಭಾರತದಲ್ಲಿ ಭಾನುವಾರ ರಾತ್ರಿ ಗೋಚರಿಸಿತು. ಸೂರ್ಯ, ಭೂಮಿ ಮತ್ತು ಚಂದ್ರರು ಒಂದೇ ಸಾಲಿನಲ್ಲಿ ಬಂದಿದ್ದ ಈ ನೆರಳು ಬೆಳಕಿನಾಟ ಎಲ್ಲರನ್ನು ನಿಬ್ಬೆರಗುಗೊಳಿಸಿತು.

ಹುಣ್ಣಿಮೆಯ ದಿನದಂದು ಆಕಾಶದಲ್ಲಿ ಖಗ್ರಾಸ ರಾಹುಗ್ರಸ್ತ ಚಂದ್ರ ಗ್ರಹಣ ಸಂಭವಿಸಿತು. 3 ಗಂಟೆ 29 ನಿಮಿಷಗಳ ಕಾಲ ಸುದೀರ್ಘವಾಗಿ ಚಂದ್ರ ತನ್ನ ಬಣ್ಣ ಬದಲಿಸುತ್ತಾ ಸಾಗಿದನು. ಕ್ಷಣ ಕ್ಷಣಕ್ಕೂ ಇದನ್ನೆಲ್ಲ ಕಣ್ತುಂಬಿಕೊಂಡ ಜನರು ಬರಿಗಣ್ಣಿನಿಂದ ಚಂದ್ರಗ್ರಹಣವನ್ನು ನೋಡಿ ಸಂತಸ ಪಟ್ಟರು. ಮೊದಲ ಬಾರಿಗೆ ಇಂತಹ ವಿಸ್ಮಯ ಕಂಡ ಮಕ್ಕಳಂತೂ ಚಂದಮಾಮನ ಪ್ರೀತಿಯಲ್ಲೇ ಉಳಿದುಕೊಂಡರು.

ಇನ್ನು ರಾತ್ರಿ 9:58ರಿಂದ ಗ್ರಹಣ ಪ್ರಕ್ರಿಯೆ ಶುರುವಾಗಿದ್ದು, 11 ಗಂಟೆ 45 ನಿಮಿಷಗಳ ಹೊತ್ತಿಗೆ ವಿಶ್ವದ ವಿವಿಧ ದೇಶಗಳು ಸೇರಿದಂತೆ ಭಾರತದಲ್ಲೂ ವಿವಿಧ ರಾಜ್ಯಗಳಲ್ಲಿ ಪೂರ್ಣ ರಕ್ತಚಂದ್ರನ ದರ್ಶನವಾಗಿದೆ. ಇನ್ನುಳಿದ ಕೆಲ ಜಿಲ್ಲೆಗಳಲ್ಲಿ ಪೂರ್ಣ ಚಂದ್ರನ ದರ್ಶನವಷ್ಟೇ ಲಭ್ಯವಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos