ಲೋಕಾಯುಕ್ತ ಕುಂದು ಕೊರತೆ ಸಭೆ

ಲೋಕಾಯುಕ್ತ ಕುಂದು ಕೊರತೆ ಸಭೆ

ಚಿಕ್ಕನಾಯಕನಹಳ್ಳಿ: ಲೋಕಾಯುಕ್ತ ಸಭೆಯು ತಾಲ್ಲೂಕು ಕೇಂದ್ರದಲ್ಲಿ ಪ್ರತಿ ತಿಂಗಳೂ ನಡೆಯಲಿದೆ ಎಂದು ಜಿಲ್ಲಾ ಲೋಕಾಯುಕ್ತ ಪೋಲೀಸ್ ಅಧೀಕ್ಷಕ ಶ್ರೀನಿವಾಸ್ ತಿಳಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳನ್ನು ದ್ದೇಶಿಸಿ ಮಾತನಾಡಿ ಕೋವಿಡ್೧೯ ಸಂದರ್ಭದಲ್ಲಿ ಕಳೆದ ಮುರ್ನಾಲ್ಕು ತಿಂಗಳಿದ ಸಾರ್ವಜನಿಕ ಕುಂದು ಕೊರತೆ ಸಭೆಯನ್ನು ನಡಸಲಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಎಲ್ಲಾ ಸುರಕ್ಷತಾ ಕ್ರಮವನ್ನು ಅನುಸರಿಸಿ ಪ್ರತಿ ತಿಂಗಳು ಸಭೆ ನಡೆಯಲಿದೆ. ಸಾರ್ವಜನಿಕರ ಗಮನಕ್ಕೆ ಕುಂದುಕೊರತೆ ಸಭೆಯ ಬಗ್ಗೆ ಮಾಹಿತಿಯನ್ನು ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಹಾಗೂ ಎಲ್ಲಾ ಗ್ರಾಮ ಪಂಚಾಯಿತಿ ಕಚೇರಿಯ ನೋಟಿಸ್ ಬೋರ್ಡ್ಗಳಲ್ಲಿ ದೊಡ್ಡದಾಗಿ ಒಂದು ವಾರ ಮುಂಚೆ ಪ್ರಕಟಿಸುವುದು ಕಡ್ಡಾಯವೆಂದರು.ಸಭೆಯಲ್ಲಿ ಕೇವಲ ಎರಡು ದೂರುಗಳು ಬಂದಿದ್ದವು, ಅದರಲ್ಲಿ ಕಸಬ ಹೋಬಳಿ ತೊನ್ನಲಾಪುರ ಗ್ರಾಮ ಸ. ನಂ.೭೬ರಲ್ಲಿ ಶಿವಬಸಪ್ಪ ಎಂಬ ರೈತನಿಗೆ ಸೇರಿದ ೨ ಎಕರೆ ಹಿಡುವಳಿ ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡದಂತೆ ಕಳೆದ ೩ ವರ್ಷದಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ ಎಂಬ ದೂರಿನ ಬಗ್ಗೆ ಗಮನ ಹರಿಸಿದ ಲೋಕಾಯುಕ್ತರು ಸಂಬಂಧಿಸಿದ ಅರಣ್ಯ ಇಲಾಖೆಯವರು ಹಾಜರಿರದ ಬಗ್ಗೆ ಅಸಮಧಾನ ವ್ಯಕ್ತಪಡಿಸಿ, ಕೂಡಲೆ ಸಭೆಗೆ ಕರೆತರುವಂತೆ ಆದೇಶಿಸಿದರು. ಸಭೆಗೆ ಎಲ್ಲಾ ಇಲಾಖಾ ಅಧಿಕಾರಿಗಳ ಹಾಜರಾತಿ ಕಡ್ಡಾಯವೆಂದು ಸೂಚಿಸಿದ್ದರೂ ಸಭೆಗೆ ಬಾರದಿದ್ದರೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು. ಲೋಕಾಯುಕ್ತರ ಕುಂದು ಕೊರತೆ ಸಭೆಯಲ್ಲಿ ಜಿಲ್ಲಾ ಲೋಕಾಯಕ್ತ ಅಧಿಕಾರಿ ಗಂಗಾಧರ್, ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಪಿಡಿಒಗಳು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos