ಲೋಕಸಭೆಗೆ ಸ್ಪರ್ಧಿಸೊಲ್ಲ, ವಿಧಾನಸಭೆಗೆ ಸ್ಪರ್ಧಿಸೋದು ನನ್ನ ಗುರಿ: ಉಪೇಂದ್ರ

ಲೋಕಸಭೆಗೆ ಸ್ಪರ್ಧಿಸೊಲ್ಲ, ವಿಧಾನಸಭೆಗೆ ಸ್ಪರ್ಧಿಸೋದು ನನ್ನ ಗುರಿ: ಉಪೇಂದ್ರ

ಹುಬ್ಬಳ್ಳಿ: ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ವಿಧಾನಸಭೆಗೆ ಸ್ಪರ್ಧಿಸುವುದು ನನ್ನ ಗುರಿ ಎಂದು ಉತ್ತಮ ಪ್ರಜಾಕೀಯ ಪಕ್ಷದನಾಯಕ, ನಟ ಉಪೇಂದ್ರ ಸ್ಪಷ್ಟಪಡಿಸಿದ್ದಾರೆ.

ಅವರು ಇಂದು ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು, ಇದೇ ವೇಳೆ ಅವರು ಇನ್ನು ಕರಪ್ಷನ್, ಸೆಲೆಕ್ಷನ್, ಎಲೆಕ್ಷನ್, ರಿಜೆಕ್ಷನ್, ಪ್ರಮೋಷನ್ ಎಂಬ ವಿಚಾರದಡಿ ನಾವು ಚುನಾವಣೆಗೆ ಹೊಗುತ್ತಿದ್ದೇವೆ. ಪ್ರಜೆಗಳೇ ಈ ಐದು ವಿಚಾರಗಳನ್ನ ನಿರ್ಧಾರ ಮಾಡುತ್ತಾರೆ. ನಮ್ಮ ಪಕ್ಷದ ಅಭ್ಯರ್ಥಿಗಳನ್ನ ಪ್ರಜೆಗಳೇ ಸೆಲೆಕ್ಷನ್ ಮಾಡ್ತಾರೆ. ನಮ್ಮ ಪಕ್ಷದ ಪ್ರಣಾಳಿಕೆ ಎರಡೂ ರೀತಿಯಲ್ಲಿ ಇರುತ್ತೆ‌ ಅಂದ್ರು.

ಈಗಾಗಲೇ 15 ರಿಂದ 18 ಕ್ಷೇತ್ರದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಇನ್ನುಳಿದ ಅಭ್ಯರ್ಥಿಗಳನ್ನು ಕೆಲವೇ ದಿನಗಳಲ್ಲಿ ಆಯ್ಕೆ ಮಾಡಲಾಗುವುದು ಎಂದರು. ಜಾತಿ ವ್ಯವಸ್ಥೆ, ಹಣದ ಆಮಿಷದಿಂದ ಇಲ್ಲಿ ಯಾವುದೇ ಅಧಿಕಾರ ಪಡೆಯುವಂತ ಪ್ರಕ್ರಿಯೆ ನಡೆಯುವುದಿಲ್ಲ ಅವರು ಮಾಹಿತಿ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos