ರಾಳೆಗಾನ್ ಸಿದ್ಧೀ(ಮಹಾರಾಷ್ಟ್ರ): ಭ್ರಷ್ಟ್ಟಾಚಾರಗಳ ನಿಯಂತ್ರಣಕ್ಕಾಗಿ ಲೋಕಪಾಲರನ್ನು ತಕ್ಷಣ ನೇಮಕ ಮಾಡಬೇಕು ಹಾಗೂ ರಾಜ್ಯದ ಲೋಕಾಯುಕ್ತ ಕಾಯ್ದೆಗೆ ಅನುಮೋದನೆ ನೀಡಬೇಕೆಂದು ಸರ್ಕಾರಗಳನ್ನು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಇಂದಿನಿಂದ ಮಹಾರಾಷ್ಟ್ರದ ರಾಳೆಗಾನ್ ಸಿದ್ಧಿ ಗ್ರಾಮದಲ್ಲಿ ಉಪವಾಸ ಸತ್ಯಾಗ್ರಹ
ಆರಂಭಿಸಿದ್ದಾರೆ.
ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರಗಳು ಲೋಕಪಾಲರ ನೇಮಕ ಮತ್ತು ಕಾಯ್ದೆ ಜಾರಿ ಬಗ್ಗೆ ನೀಡಿದ್ದ ಆಶ್ವಾಸನೆ ಇಲ್ಲಿಯವರೆಗೂ
ಈಡೇರಿಲ್ಲ ಎಂದು ಆರೋಪಿಸಿ ಅಣ್ಣಾ ಆರಂಭಿಸಿರುವ ಅನಿರ್ದಿಷ್ಟ ನಿರಶನಕ್ಕೆ ಸಮಾಜ ಸೇವಕರು, ವಿವಿಧ ಸಂಘಟನೆಗಳ ಮುಖ್ಯಸ್ಥರು ಮತ್ತು ಪದಾಧಿಕಾರಿಗಳು, ಯುವ ಜನರು, ಯುವಕರು, ವಿದ್ಯಾರ್ಥಿಗಳು, ರೈತರು ಮತ್ತು ಸಮಾಜದ ವಿವಿಧ ವರ್ಗಗಳ ಜನರು ಬೆಂಬಲ ಸೂಚಿಸಿ ಸತ್ಯಾಗ್ರಹದಲ್ಲಿ
ಭಾಗವಹಿಸಿದ್ದಾರೆ.
ಮಹಾರಾಷ್ಟ್ರದ ಅಹಮದ್ ನಗರ್ ಜಿಲ್ಲೆಯ ತಮ್ಮ ಸ್ವಗ್ರಾಮ ರಾಳೆಗಾನ್ ಸಿದ್ಧಿಯಲ್ಲಿರುವ ಪದ್ಮಾವತಿ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಅಣ್ಣಾ ಅಸಂಖ್ಯಾತ ಜನರೊಂದಿಗೆ ಮೆರವಣಿಗೆಯಲ್ಲಿ ತೆರಳಿ ಯಾದವ್‍ಬಾಬಾ ಮಂದಿರದ ಬಳಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.