ರಾಮನಗರ, ಜೂನ್.1, ನ್ಯೂಸ್ ಎಕ್ಸ್ ಪ್ರೆಸ್: ರಾಮನಗರ ತಾಲೂಕಿನ ಮೇರೆಗೌಡನದೊಡ್ಡಿ ಗ್ರಾಮದಲ್ಲಿ ಸಮರ್ಪಕ ವಿದ್ಯುತ್ ಸಂಪರ್ಕ ನೀಡಿಲ್ಲ ಎಂದು ಜೆಡಿಎಸ್ ಮುಖಂಡರೊಬ್ಬರು ಲೈನ್ ಮೆನ್ ಗಳ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಮೇರೆಗೌಡನದೊಡ್ಡಿ ಗ್ರಾಮದ ಮಂಜು ಹಲ್ಲೆ ಮಾಡಿದ ಜೆಡಿಎಸ್ ಮುಖಂಡ. ಮಂಜು ಭೈರಮಂಗಲ ಗ್ರಾಮ ಪಂಬಾಯತ್ ಅಧ್ಯಕ್ಷ ರವಿ ಸಹೋದರನಾಗಿದ್ದು, ಲೈನ್ ಮೆನ್ ಗಳಾದ ಕಿರಣ್ ಹಾಗೂ ನಾಯಕ ಎಂಬವವರ ಮೇಲೆ ಹಲ್ಲೆ ನಡೆಸಿದ್ದಾರೆ. ಸುರಿದ ಭಾರಿ ಗಾಳಿ ಮಳೆಗೆ ಜಮೀನುಗಳ ಮೋಟರ್ ಗಳಿಗೆ ನೀಡಿದ್ದ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. 2 ದಿನ ಆದರೂ ಯಾರೊಬ್ಬರು ಬಂದು ಸರಿ ಮಾಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಮಂಜು ಅವರು ಬೆಸ್ಕಾಂ ವಾಹವನ್ನು ತಡೆದು ಕಿರಣ್ ಹಾಗೂ ನಾಯಕ ಮೇಲೆ ಹಲ್ಲೆ ಮಾಡಿದ್ದಾರೆ. ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಜೆಡಿಎಸ್ ಮುಖಂಡ ಮಂಜು ಅವರ ವರ್ತನೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.