ಸೇವಾದಳ ಸಮಾಜಕ್ಕೆ ಸದ್ಭಳಕೆಯಾಗಲಿ

  • In State
  • January 3, 2021
  • 252 Views
ಸೇವಾದಳ ಸಮಾಜಕ್ಕೆ ಸದ್ಭಳಕೆಯಾಗಲಿ

ಚಾಮರಾಜನಗರ: ನಗರದ ಭಾರತ ಸೇವಾದಳ ಜಿಲ್ಲಾ ಸಮಿತಿ ಕಚೇರಿಯಲ್ಲಿ ಸೇವಾದಳ ಸಪ್ತಾಹ ಸಮಾರೋಪ ಸಮಾರಂಭ ನಡೆಯಿತು.
ಸೇವಾದಳ ಸಂಸ್ಥಾಪಕ ನಾ.ಸು.ಹರ್ಡಿಕರ್ ಭಾವಚಿತ್ರಕ್ಕೆ ಭಾರತ್ ಸೇವಾದಳ ಜಿಲ್ಲಾ ಸಮಿತಿ ಅಧ್ಯಕ್ಷ ಎಂ.ರಾಮಚAದ್ರ ಸೇರಿದಂತೆ ಪದಾಧಿಕಾರಿಗಳು ಪುಷ್ಪಾರ್ಚನೆ ನೆರವೇರಿಸಿದರು.
ನಂತರ ಮಾತನಾಡಿ, ನಾ.ಸು.ಹರ್ಡಿಕರ್ ಅವರು ಭಾರತ ಸೇವಾದಳದ ಸ್ಥಾಪಿಸಿ ದೇಶದ ಜನರಲ್ಲಿ ರಾಷ್ಟ್ರಪೇಮ, ಸ್ವಯಂಶಿಸ್ತು, ನೈತಿಕ ಮೌಲ್ಯಗಳನ್ನು ಬೆಳಸಿ ಜನ ಜಾಗೃತಿ ಮೂಡಿಸಿದರು. ಪ್ರಸ್ತುತ ಸಮಾಜಕ್ಕೆ ಸೇವಾದಳದ ಸದ್ಭಳಕೆಯಾಗಬೇಕಿದೆ ಎಂದರು.
ತಾಲೂಕು ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ಕೇಂದ್ರ ಪರಿಹಾರ ಸಮಿತಿ ರಾಜ್ಯಾಧ್ಯಕ್ಷರಾಗಿ ಎಂ. ರಾಮಚಂದ್ರ ಅವರನ್ನು ಸರಕಾರ ನೇಮಕ ಮಾಡಿದೆ. ಸೇವಾದಳದ ಜಿಲ್ಲಾಧ್ಯಕ್ಷರಾಗಿ ಉತ್ತಮ ಕೆಲಸನಿರ್ವಹಿಸುತ್ತಿದ್ದಾರೆ, ಅವರು ಅಧಿಕಾರಕ್ಕಾಗಿ ಆಸೆಪಟ್ಟವರಲ್ಲ. ಅವರನ್ನೇ ಅಧಿಕಾರ ಹುಡುಕಿಕೊಂಡು ಬಂದಿದೆ. ಇನ್ನು ಅವರ ಕೆಲಸಕ್ಕೆ ಮತ್ತಷ್ಟು ಉತ್ತೇಜನ ಸಿಗುವ ಕೆಲಸವಾಗಬೇಕು, ಈಗಲೂ ಕೂಡಾ ಅವರು ಸಮಾಜಮುಖಿ ಕೆಲಸಗಳತ್ತ ಚಿತ್ತ ಹರಿಸಿದ್ದಾರೆ. ಅವರ ಕಾರ್ಯಗಳಿಗೆ ಸೇವಾದಳದ ಸಹಕಾರ ಮುಂದಿನ ಎಲ್ಲದಿನಗಳಲ್ಲೂ ಇರಲಿದೆ ಎಂದರು.
ಉಪಾಧ್ಯಕ್ಷ ವೆಂಕಟನಾಗಪ್ಪಶೆಟ್ಟಿ(ಬಾಬು)ಮಾತನಾಡಿ, ಸೇವಾದಳದ ಸಪ್ತಾಹದ ಅಂಗವಾಗಿ ವಾರಗಳ ಕಾಲ ಚರ್ಚಾಸ್ಪರ್ಧೆ, ಪ್ರಬಂಧಸ್ಪರ್ಧೆ ಏರ್ಪಡಿಸಿ ರಾಷ್ಟ್ರಧ್ವಜದ ಮಹತ್ವ ಕುರಿತು ತಿಳಿಸಿ ಕೊಡಲಾಯಿತು.
ಇದೇ ಸಂದರ್ಭದಲ್ಲಿ ಕೇಂದ್ರಪರಿಹಾರ ಸಮಿತಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಸೇವಾದಳದ ಜಿಲ್ಲಾಧ್ಯಕ್ಷ ಎಂ.ರಾಮಚಂದ್ರ ಅವರನ್ನು ಸೇವಾದಳದ ವತಿಯಿಂದ ಸನ್ಮಾನಿಸಲಾಯಿತು. ಭಾರತ ಸೇವಾದಳದ ಜಿಲ್ಲಾ ಸಂಘಟನಕಾರ ಕೆ.ವೀರಯ್ಯ, ತಾಲೂಕು ಅಧಿನಾಯಕ ನಾಗಣ್ಣ, ಸದಸ್ಯರಾದ ಮಂಜು, ನಾಗರಾಜು, ದೈಹಿಕ ಶಿಕ್ಷಕ ವೇಣುಗೋಪಾಲ್, ಕಾರ್ಯದರ್ಶಿ ಬಸವಣ್ಣ, ರವಿಚಂದ್ರಪ್ರಸಾದ್, ಆರ್.ಎಂ.ಮಹದೇವಪ್ಪ ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos