ಹಿರಿಯ ವಕೀಲ ರಾಮ್ ಜೇಠ್ಮಲಾನಿ ವಿಧಿವಶ

ಹಿರಿಯ ವಕೀಲ ರಾಮ್ ಜೇಠ್ಮಲಾನಿ ವಿಧಿವಶ

ನವದೆಹಲಿ, ಸೆ.8 : ಮಾಜಿ ಕಾನೂನು ಸಚಿವ, ಹಿರಿಯ ವಕೀಲ ರಾಮ್ ಜೇಠ್ಮಲಾನಿ ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ರಾಮ್ ಜೇಠ್ಮಲಾನಿ ಅವರಿಗೆ 96 ವರ್ಷ ವಯಸ್ಸಾಗಿತ್ತು. ಹೊಸದೆಹಲಿಯ ಮನೆಯಲ್ಲಿ ಅವರು ಕೊನೆಯುಸಿರೆಳೆದರು. ಸಿಂಧ್ ಪ್ರಾಂತ್ಯದ ಶಿಕಾರ್ಪುರದಲ್ಲಿ ಸೆಪ್ಟೆಂಬರ್ 14 1923ರಲ್ಲಿ ರಾಮ್ ಬೂಲ್ ಚಂದ್ ಜೇಠ್ಮಲಾನಿ ಜನಿಸಿದರು. ತನ್ನ 13ನೇ ವಯಸ್ಸಿನಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಅವರು 17ನೇ ವರ್ಷಕ್ಕೆ ಕಾನೂನು ಪದವಿ ಪಡೆದಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos