ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್

ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್

ನವದೆಹಲಿ, ಡಿ. 16: ನಿನ್ನೆ ಸುಮಾರು 7-8 ಗಂಟೆಯ ಸಮಯ. ದೆಹಲಿಯ ಆಲಿಘಡ್ ಮುಸ್ಲಿಂ ವಿವಿ ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಕ್ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ಕೈಬಿಡಲು ವಿದ್ಯಾರ್ಥಿಗಳು ಒಪ್ಪದ ಹಿನ್ನೆಲೆ ಕ್ಯಾಂಪಸ್ಗೆ ಪೊಲೀಸರು ನುಗ್ಗಿ ಲಾಠಿ ಚಾರ್ಜ್ ನಡೆಸಿದ್ದಾರೆ.

ಪೊಲೀಸರು ಕ್ಯಾಂಪಸ್ನ ಇಂಚಿಂಚೂ ಬಿಡದೇ, ಅಲ್ಲಿದ್ದ ವಿದ್ಯಾರ್ಥಿಗಳನ್ನ ಓಡಿಸಿದ್ದಾರೆ. ಈ ಮಧ್ಯೆ ಸಂಘರ್ಷ ತೀವ್ರಗೊಂಡಿದ್ದು, ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಕ್ಯಾಂಪಸ್ನ ಹಾಸ್ಟೆಲ್, ಪ್ರಾರ್ಥನಾ ಪ್ರದೇಶ, ಕಿಚನ್, ಕ್ಲಾಸ್ ರೂಮ್ಸ್ ಸೇರಿದಂತೆ ಎಲ್ಲಾ ಕಡೆ ತಲಾಶ್ ನಡೆಸಿದ ಪೊಲೀಸರು, ಒಳಗಡೆ ಇದ್ದವರನ್ನ ಎಳೆತಂದು ಹೊರಕ್ಕೆ ಹಾಕಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ವೇಳೆ ಕೊಠಡಿಗಳಲ್ಲಿ ಅಡಗಿ ಕುಳಿತಿದ್ದವರ ಮೇಲೆ ಟಿಯರ್ ಗ್ಯಾಸ್ ಬಿಟ್ಟ ಘಟನೆ ಕೂಡ ನಡೆದಿದೆ. ಜೊತೆಗೆ ಹಲವರನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿವಿಯ ಟ್ಯಾಯ್ಲೆಟ್ನಲ್ಲಿ ಅಡಗಿ ಕುಳಿತಿದ್ದವರನ್ನು ಬಿಡದೇ ಏಟು ಕೊಟ್ಟಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ. ಅಲ್ಲದೇ ವಿವಿ ಕ್ಯಾಂಪಸ್ನಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ.

ಇದಕ್ಕೂ ಮೊದಲು ವಿವಿ ಆಡಳಿತಾಂಗದ ಅಧಿಕಾರಿಗಳು ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಿದ್ದರು. ಅಲ್ಲದೇ ವಿವಿಗೆ ಚಳಿಗಾಲದ ರಜೆಯನ್ನು, ನಿಗದಿಗೂ ಮೊದಲೇ ಘೋಷಿಸಿ ನಿನ್ನೆಯಿಂದಲೇ ರಜೆ ಜಾರಿ ಮಾಡಲಾಗಿದೆ. ಅಷ್ಟೆ ಅಲ್ಲದೇ ಪ್ರತಿಭಟನಾಕಾರರ ಜೊತೆ ಮಾತನಾಡಿ ತಮ್ಮ ತಮ್ಮ ಊರುಗಳಿಗೆ ತೆರಳುವಂತೆ ಸೂಚಿಸಿತ್ತು. ಆದರೆ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಿಲ್ಲಿಸಲು ಒಪ್ಪಲೇ ಇಲ್ಲ.

ಈ ಮಧ್ಯೆ ಕ್ಯಾಂಪಸ್ಗೆ ನುಗ್ಗಿದ್ದ ಪೊಲೀಸರು, ಕೊನೆಗೆ ವಿದ್ಯಾರ್ಥಿಗಳು ತಮ್ಮೆದುರು ಎರಡೂ ಕೈಗಳನ್ನು ಮೇಲೆಕ್ಕೆತ್ತಿಕೊಂಡು ಶಾಂತಿ.. ಶಾಂತಿ.. ಶಾಂತಿ ಘೋಷಣೆ ಕೂಗುತ್ತಾ ಹೋಗುವಂತೆ ಮಾಡಿದರು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos