ಬೆಳಗಾವಿ, ಆ. 19 : ಲಾರಿ ಚಾಲಕನೊಬ್ಬನು ಮಾಡಿದ ಕೆಲಸವೊಂದಕ್ಕೆ ಕೋಪಗೊಂಡ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ ಹೊರವಲಯ ಹಾನಿಯಾದ ಸೇತುವೆವೊಂದರ ಮೇಲೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಸೇತುವೆ ಮೇಲೆ ಚಾಲಕನೊಬ್ಬ ಲಾರಿ ಚಾಲನೆ ಮಾಡಿದ್ದಾನೆ. ಹಿನ್ನಲೆ ಕೋಪಗೊಂಡ ಶಾಸಕಿ ಅಂಜಲಿ ನಿಂಬಾಳ್ಕರ್ ಸಣ್ಣ ಸೇತುವೆ ಮೇಲೆ ಹೇಗೆ ಲಾರಿ ಚಾಲನೆ ಮಾಡಿದೆ. ಗೊತ್ತಾಗಲ್ವಾ? ಎಂದು ಲಾರಿಯಿಂದ ಚಾಲಕನನ್ನು ಕೆಳಗಿಳಿಸಿ ಒಂದು ತಿಂಗಳ ಕಾಲ ನಿನ್ನ ಲಾರಿಯನ್ನು ಇಲ್ಲೇ ನಿಲ್ಲಿಸುತ್ತೇನೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.